ಮೊದಲಾರ್ಧ ಮುಕ್ತಾಯಕ್ಕೆ ಗೋವಾ 3-1 ಗೋಲುಗಳ ಮುನ್ನಡೆ ಸಾಧಿಸಿತ್ತು. ಆ ಬಳಿಕ ಬೆಂಗಳೂರು ತಿರುಗೇಟು ನೀಡಿತಾದರೂ ಅಂತಿಮವಾಗಿ ಕೊರೊಮಿನಾಸ್ ಬಾರಿಸಿದ ಗೋಲಿನ ನೆರವಿನಿಂದ ಗೋವಾ ರೋಚಕ ಜಯ ದಾಖಲಿಸಿತು.

ಗೋವಾ(ನ.30): ಸತತ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದ್ದ ಬೆಂಗಳೂರು ಎಫ್'ಸಿ ಕನಸು ಭಗ್ನವಾಗಿದೆ. ತವರಿನಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಿಂದ ಕಣಕ್ಕಿಳಿದಿದ್ದ ಸುನಿಲ್ ಚೆಟ್ರಿ ಪಡೆಗೆ ಗೋವಾ ಶಾಕ್ ನೀಡಿದೆ. ಗೋವಾ ವಿರುದ್ಧ 3-4 ಗೋಲುಗಳ ಅಂತರದಲ್ಲಿ ಬಿಎಫ್'ಸಿ ಸೋಲುಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗೋವಾ ಪರ ಫೆರಾನ್ ಕೊರೊಮಿನಾಸ್ ಹ್ಯಾಟ್ರಿಕ್ ಗೋಲು ಬಾರಿಸಿ ಗೆಲುವಿನ ರೂವಾರಿಯಾದರು. ಪಂದ್ಯದ 16ನೇ ನಿಮಿಷದಲ್ಲಿ ಗೋವಾ ಮೊದಲ ಗೋಲು ದಾಖಲಿಸಿತು. ಇದಕ್ಕೆ ಪ್ರತಿಯಾಗಿ ಬೆಂಗಳೂರು 21ನೇ ನಿಮಿಷದಲ್ಲಿ ಮಿಕು ಗೋಲು ಬಾರಿಸು ಸಮಬಲ ಸಾಧಿಸಿದರು.

ಮೊದಲಾರ್ಧ ಮುಕ್ತಾಯಕ್ಕೆ ಗೋವಾ 3-1 ಗೋಲುಗಳ ಮುನ್ನಡೆ ಸಾಧಿಸಿತ್ತು. ಆ ಬಳಿಕ ಬೆಂಗಳೂರು ತಿರುಗೇಟು ನೀಡಿತಾದರೂ ಅಂತಿಮವಾಗಿ ಕೊರೊಮಿನಾಸ್ ಬಾರಿಸಿದ ಗೋಲಿನ ನೆರವಿನಿಂದ ಗೋವಾ ರೋಚಕ ಜಯ ದಾಖಲಿಸಿತು.