ಈ ಪಂದ್ಯದಲ್ಲಿ ಮುಂದಿನ ಹಂತಕ್ಕೇರಲು ಮಾಲ್ಡೀವ್ಸ್'ನ ತಂಡಕ್ಕೆ ಡ್ರಾ ಫಲಿತಾಂಶವಾಗಿದ್ದರೂ ಸಾಕಿತ್ತು. ಪಂದ್ಯದುದ್ದಕ್ಕೂ ಮಾಝಿಯಾ ತಂಡದ ಡಿಫೆನ್ಸ್ ಬಹಳ ಪ್ರಬಲವಾಗಿತ್ತು. ಬೆಂಗಳೂರು ಫುಟ್ಬಾಲ್ ಕ್ಲಬ್'ನ ಆಟಗಾರರು ಎಷ್ಟೇ ಪ್ರಯತ್ನಿಸಿದರೂ ಮಾಝಿಯಾದ ರಕ್ಷಣಾ ಕೋಟೆಯನ್ನು ಭೇದಿಸಿ ಗೋಲು ಗಳಿಸಲು ಕಷ್ಟಕರವಾಗಿತ್ತು.
ಬೆಂಗಳೂರು: ಕಳೆದ ಬಾರಿಯ ಎಎಫ್'ಸಿ ಕಪ್ ರನ್ನರ್'ಅಪ್ ಬೆಂಗಳೂರು ಎಫ್'ಸಿ ಇದೀಗ ಗ್ರೂಪ್ ಟಾಪರ್ ಆಗಿ ಮುಂದಿನ ಹಂತಕ್ಕೇರಿದೆ. ನಿನ್ನೆ ರಾತ್ರಿ ಶ್ರೀಕಂಠೀರವ ಸ್ಟೇಡಿಯಂನಲ್ಲಿ ನಡೆದ 'ಇ' ಗುಂಪಿನ ಕೊನೆಯ ಲೀಗ್ ಮ್ಯಾಚ್'ನಲ್ಲಿ ಮಾಲ್ಡೀವ್ಸ್'ನ ಮಾಝಿಯ ತಂಡದ ವಿರುದ್ಧ 1-0 ಗೋಲಿನಿಂದ ರೋಚಕ ಗೆಲುವು ಪಡೆಯಿತು. ಮಾಡು ಇಲ್ಲವೇ ಮಡಿ ಎನ್ನುವಂತಿದ್ದ ಈ ಪಂದ್ಯದಲ್ಲಿ ಬೆಂಗಳೂರಿನ ನಾಯಕ ಸುನೀಲ್ ಛೆಟ್ರಿ 57ನೇ ನಿಮಿಷದಲ್ಲಿ ಫ್ರೀಕಿಕ್'ನಲ್ಲಿ ಗೋಲು ಗಳಿಸಿ ತಂಡಕ್ಕೆ ಮಹತ್ವದ ಗೆಲುವು ಪ್ರಾಪ್ತವಾಗಿಸಿದರು.
ಈ ಪಂದ್ಯದಲ್ಲಿ ಮುಂದಿನ ಹಂತಕ್ಕೇರಲು ಮಾಲ್ಡೀವ್ಸ್'ನ ತಂಡಕ್ಕೆ ಡ್ರಾ ಫಲಿತಾಂಶವಾಗಿದ್ದರೂ ಸಾಕಿತ್ತು. ಪಂದ್ಯದುದ್ದಕ್ಕೂ ಮಾಝಿಯಾ ತಂಡದ ಡಿಫೆನ್ಸ್ ಬಹಳ ಪ್ರಬಲವಾಗಿತ್ತು. ಬೆಂಗಳೂರು ಫುಟ್ಬಾಲ್ ಕ್ಲಬ್'ನ ಆಟಗಾರರು ಎಷ್ಟೇ ಪ್ರಯತ್ನಿಸಿದರೂ ಮಾಝಿಯಾದ ರಕ್ಷಣಾ ಕೋಟೆಯನ್ನು ಭೇದಿಸಿ ಗೋಲು ಗಳಿಸಲು ಕಷ್ಟಕರವಾಗಿತ್ತು. ಪಂದ್ಯದ ಮೊದಲಾರ್ಧದಲ್ಲಿ ಮಾಝಿಯಾ ಮೇಲುಗೈ ಸಾಧಿಸಿತಾದರೂ, ದ್ವಿತೀಯಾರ್ಧದಲ್ಲಿ ಬೆಂಗಳೂರಿಗರು ಹತಾಶರಾಗದೇ ನಿರಂತರವಾಗಿ ದಾಳಿ ಸಂಯೋಜಿಸಿದ ಪರಿಣಾಮ 57ನೇ ನಿಮಿಷದಲ್ಲಿ ಛೇಟ್ರಿಗೆ ಗೋಲು ಗಳಿಸಲು ಸಾಧ್ಯವಾಯಿತು.
ಕಳೆದ ಬಾರಿ ಬೆಂಗಳೂರು ಎಫ್'ಸಿ ಈ ಟೂರ್ನಿಯಲ್ಲಿ ರನ್ನರ್'ಅಪ್ ಆಗಿತ್ತು. ಈ ಬಾರಿ ಆ ಸಾಧನೆಯನ್ನು ಮೀರಿಸುವ ಅವಕಾಶವನ್ನು ಜೀವಂತವಾಗಿರಿಸಿಕೊಂಡಿದೆ.
