ಇಲ್ಲಿನ ರಾಜ್ಯ ಟೆನಿಸ್ ಸಂಸ್ಥೆ (ಕೆಎಸ್ಎಲ್‌ಟಿಎ) ಟೆನಿಸ್ ಕೋರ್ಟ್‌ನಲ್ಲಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಸೆಮೀಸ್‌ನಲ್ಲಿ ಸಾಕೇತ್, ಕಜಕಸ್ತಾನದ ಅಲೆಕ್ಸಾಂಡರ್ ನೆಡುವ್ಯೆಸೊವ್ ವಿರುದ್ಧ 4-6, 6-4, 6-4 ಸೆಟ್‌ಗಳಲ್ಲಿ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟರೆ, ಮತ್ತೊಂದರಲ್ಲಿ ಪ್ರಜ್ನೇಶ್ ಗುಣೇಶ್ವರನ್, ಕೆನಡಾದ ಬ್ರೇಡನ್ ಸ್ಕನ್ನರ್ ಎದುರು 6-4, 6-1 ನೇರ ಸೆಟ್‌ಗಳಲ್ಲಿ ಜಯಿಸಿ ಫೈನಲ್‌ಗೇರಿದರು.

ಬೆಂಗಳೂರು: ಭಾರತದ ಸಿಂಗಲ್ಸ್ ಆಟಗಾರರಾದ ಸಾಕೇತ್ ಮೈನೇನಿ ಮತ್ತು ಪ್ರಜ್ನೇಶ್ ಗುಣೇಶ್ವರನ್, ಇಂದು ಇಲ್ಲಿ ನಡೆಯಲಿರುವ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ. 

ಇಲ್ಲಿನ ರಾಜ್ಯ ಟೆನಿಸ್ ಸಂಸ್ಥೆ (ಕೆಎಸ್ಎಲ್‌ಟಿಎ) ಟೆನಿಸ್ ಕೋರ್ಟ್‌ನಲ್ಲಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಸೆಮೀಸ್‌ನಲ್ಲಿ ಸಾಕೇತ್, ಕಜಕಸ್ತಾನದ ಅಲೆಕ್ಸಾಂಡರ್ ನೆಡುವ್ಯೆಸೊವ್ ವಿರುದ್ಧ 4-6, 6-4, 6-4 ಸೆಟ್‌ಗಳಲ್ಲಿ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟರೆ, ಮತ್ತೊಂದರಲ್ಲಿ ಪ್ರಜ್ನೇಶ್ ಗುಣೇಶ್ವರನ್, ಕೆನಡಾದ ಬ್ರೇಡನ್ ಸ್ಕನ್ನರ್ ಎದುರು 6-4, 6-1 ನೇರ ಸೆಟ್‌ಗಳಲ್ಲಿ ಜಯಿಸಿ ಫೈನಲ್‌ಗೇರಿದರು.

ಪುರವ್ ಜೋಡಿ ರನ್ನರ್ ಅಪ್: ಡಬಲ್ಸ್ ಪೈನಲ್‌ನಲ್ಲಿ ಪುರವ್ ರಾಜಾ, ಕ್ರೋವೇಷಿಯಾದ ಆಂಟೋನಿಯೊ ಜೋಡಿ ಸೋಲುಂಡು ರನ್ನರ್‌ಅಪ್ ಆಯಿತು.