Asianet Suvarna News Asianet Suvarna News

ಸೆಮಿಫೈನಲ್ ಅವಕಾಶ ಗಟ್ಟಿಗೊಳಿಸಿದ ಬಿಎಫ್'ಸಿ

Bengaluru FC win in AFC Cup behind closed doors after CK Vineeth strike

ಬೆಂಗಳೂರು(ಸೆ.14): ಸ್ಟಾರ್‌ ಮಿಡ್‌ಫೀಲ್ಡರ್‌ ಸಿ.ಕೆ. ವಿನೀತ್‌ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಬೆಂಗಳೂರು ಫುಟ್ಬಾಲ್‌ ಕ್ಲಬ್‌ (ಬಿಎಫ್‌ಸಿ), ಎಎಫ್‌ಸಿ ಕಪ್‌ ಫುಟ್ಬಾಲ್‌ ಟೂರ್ನಿಯ ಮೊದಲ ಹಂತದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ 1-0 ಗೋಲುಗಳಿಂದ ಸಿಂಗಾಪುರದ ಟ್ಯಾಂಪನೀಸ್‌ ರೋವರ್ಸ್‌ ಎದುರು ಜಯಸಾಧಿಸಿ ಸೆಮಿಫೈನಲ್‌ ಪ್ರವೇಶಿಸಿಸುವ ತನ್ನ ಅವಕಾಶವನ್ನು ಗಟ್ಟಿಗೊಳಿಸಿಕೊಂಡಿದೆ.

ಸೆಪ್ಟೆಂಬರ್ 21ರಂದು ಸಿಂಗಾಪುರದಲ್ಲಿ ಮತ್ತೊಂದು ದ್ವಿತೀಯ ಲೆಗ್'ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇದೇ ರೋವರ್ಸ್ ತಂಡವನ್ನು ಬಿಎಫ್'ಸಿ ಎದುರಿಸಲಿದೆ. ಅಲ್ಲಿನ ಫಲಿತಾಂಶ ತಂಡದ ಉಪಾಂತ್ಯವನ್ನು ನಿರ್ಧ

ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಬಿಎಫ್‌ಸಿ ತಂಡ ಮಿಡ್‌ಫೀಲ್ಡರ್‌ ವಿನೀತ್‌ 7ನೇ ನಿಮಿಷದಲ್ಲಿ ದಾಖಲಿಸಿದ ಏಕೈಕ ಗೋಲಿನ ಸಹಾಯದಿಂದ ಬೆಂಗಳೂರು ತಂಡ ಉಪಾಂತ್ಯಕ್ಕೆ ಪ್ರವೇಶಿಸಿ ಟೂರ್ನಿಯಲ್ಲಿ ಮಹತ್ವದ ಮುನ್ನಡೆ ಸಾಧಿಸಿದೆ.  ಇದರ ನಡುವೆಯೇ ನಡೆದ ಪಂದ್ಯದಲ್ಲಿ ಎರಡು ತಂಡಗಳ ಆಟಗಾರರು ಆರಂಭದಲ್ಲಿ ಗೋಲುಗಳಿಸುವ ವಿಶ್ವಾಸದಲ್ಲಿ ಕಣಕ್ಕಿಳಿದಿದ್ದರು. ಆದರೆ ಗೋಲಿನ ಖಾತೆ ತೆರೆದಿದ್ದು ಆತಿಥೇಯ ಆಟಗಾರರು ಮಾತ್ರ, ಪಂದ್ಯದಲ್ಲಿ ವಿನೀತ್‌ ಗಳಿಸಿದ ಏಕೈಕ ಗೋಲು ಬಿಎಫ್‌ಸಿಗೆ ಜಯದ ಉಡುಗೊರೆಯಾಯಿತು. ಪಂದ್ಯದ ಆರಂಭದಲ್ಲಿ ನಾಯಕ ಛೆಟ್ರಿ ಆಲ್ವಿನ್‌ ಜಾಜ್‌ರ್‍ ಅವರಿಗೆ ಪಾಸ್‌ ನೀಡಿದರು. ಜಾಜ್‌ರ್‍ ಅವರನ್ನು ಎದುರಾಳಿ ತಂಡದ ಆಟಗಾರರು ಟ್ಯಾಕಲ್‌ ಮಾಡುವಲ್ಲಿ ಯಶಸ್ವಿಯಾದರು. ಇದಕ್ಕೂ ಮುನ್ನ ಜಾಜ್‌ರ್‍ ಚೆಂಡನ್ನು ನೇರವಾಗಿ ವಿನೀತ್‌ಗೆ ಪಾಸ್‌ ನೀಡಿದರು.

ಯಾವುದೇ ತಪ್ಪನ್ನು ಮಾಡದ ವಿನೀತ್‌ ಚೆಂಡನ್ನು ನೇರವಾಗಿ ಗೋಲು ಪೆಟ್ಟಿಗೆಯೊಳಗೆ ಸೇರಿಸಿ ಬಿಎಫ್‌ಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ನಂತರದ ಆಟದಲ್ಲಿ ಇದೇ ನಿಖರತೆಯನ್ನು ಕಂಡುಕೊಂಡ ಆತಿಥೇಯರು ಪ್ರವಾಸಿ ತಂಡದ ಆಟಗಾರರ ಮೇಲೆ ಅಕ್ಷರಶಃ ಸವಾರಿ ನಡೆಸಿದರು. ಮತ್ತೊಮ್ಮೆ ವಿನೀತ್‌ ಜೊತೆಯಲ್ಲಿ ಛೆಟ್ರಿ, ನಿಶುಕುಮಾರ್‌ ಅವರೊಂದಿಗೆ ಚೆಂಡಿನ ಹಿಡಿತ ಸಾಧಿಸಿ, ಎಡಭಾಗದ ಕಡೆಯಿಂದ ಜುಆನ್‌ ಗೊಂಜಲ್‌್ಜ, ಜಾನ್‌ ಜಾನ್ಸನ್‌ ಮತ್ತು ರಿನೊ ಆಂಟೋ ಅವರಿಗೆ ಚೆಂಡನ್ನು ನೀಡುತ್ತಾ ಟ್ಯಾಂಪನೀಸ್‌ ತಂಡದ ರಕ್ಷಣಾ ಕೋಟೆಯನ್ನು ಬೇಧಿಸುವಲ್ಲಿ ಯಶಸ್ವಿಯಾದರು. ಆದರೆ ಈ ಬಾರಿ ಗೋಲುಗಳಿಸುವಲ್ಲಿ ಸಾಧ್ಯವಾಗಲಿಲ್ಲ.

31ನೇ ನಿಮಿಷದಲ್ಲಿ ನಾಯಕ ಛೆಟ್ರಿ ಇಗ್ಯೂನ್ಸನ್‌ ಲಿಂಗ್ಡೋ ಅವರಿಗೆ ಅದ್ಭುತ ಪಾಸ್‌ ನೀಡಿದ್ದರು. ಈ ವೇಳೆ ಲಿಂಗ್ಡೋ ಯಾವುದೇ ತಪ್ಪಿಗೆ ದಾರಿ ಮಾಡಿಕೊಡದೇ ನೇರವಾಗಿ ಗೋಲುಪೆಟ್ಟಿಗೆಗೆ ಚೆಂಡನ್ನು ಹೊಡೆದರಾದರೂ ಎದುರಾಳಿ ತಂಡದ ಗೋಲ್‌ಕೀಪರ್‌ ಇಜ್ವಾನ್‌ ಮಹಬುದ್‌ ಆಕರ್ಷಕವಾಗಿ ಹಿಡಿತಕ್ಕೆ ಪಡೆದು, ಬಿಎಫ್‌ಸಿ ತಂಡದ ಮುನ್ನಡೆಗೆ ಅಡ್ಡಿಯಾದರು. ದ್ವಿತೀಯಾರ್ಧದ ಆಟದ 72ನೇ ನಿಮಿಷದಲ್ಲಿ ವಿನೀತ್‌ಗೆ ಮತ್ತೊಂದು ಗೋಲುಗಳಿಸುವ ಅವಕಾಶವಿತ್ತು. ಆದರೆ ವಿನೀತ್‌ ಮಾಡಿದ ತಪ್ಪಿನಿಂದಾಗಿ ಗೋಲು ದಾಖಲಾಗಲಿಲ್ಲ. ಪಂದ್ಯದಲ್ಲಿ ಟ್ಯಾಂಪನೀಸ್‌ ತಂಡದ ಆಟಗಾರರಿಗೆ ಗೋಲುಗಳಿಸುವ ಸಾಕಷ್ಟುಅವಕಾಶವಿತ್ತು. ಆದರೂ ಆಟಗಾರರ ಎಡವಟ್ಟುಗಳು ತಂಡಕ್ಕೆ ದುಬಾರಿಯಾಯಿತು. ಅಂತಿಮವಾಗಿ ವಿನೀತ್‌ ಗಳಿಸಿದ ಏಕೈಕ ಗೋಲು ಬಿಎಫ್‌ಸಿ ತಂಡದ ಜಯಕ್ಕೆ ಕಾರಣವಾಯಿತು.

Follow Us:
Download App:
  • android
  • ios