ಈಗಾಗಲೇ ತೆಲುಗು ಟೈಟಾನ್ಸ್ ವಿರುದ್ಧ ಜಯಸಾಧಿಸಿ ಆತ್ಮವಿಶ್ವಾಸದಲ್ಲಿರುವ ಬುಲ್ಸ್ ಪಡೆ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ.
ಬೆಂಗಳೂರು(ಆ.04): ಕಾರಣಾಂತರಗಳಿಂದ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪಂದ್ಯಗಳು ನಾಗ್ಪುರಕ್ಕೆ ಸ್ಥಳಾಂತರಗೊಂಡಿದ್ದು, ಇಂದು ಬೆಂಗಳೂರು ಬುಲ್ಸ್ ತಂಡ ತಮಿಳ್ ತಲೈವಾಸ್ ಎದುರಿಸಲು ಸಜ್ಜಾಗಿದೆ.
ನಾಗ್ಪುರದ ಮಂಕಾಪುರ್ ಒಳಾಂಗಣ ಮೈದಾನದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ರೋಹಿತ್ ಕುಮಾರ್ ನೇತೃತ್ವದ ಬುಲ್ಸ್ ಪಡೆ ತವರು ಚರಣದ ಮೊದಲ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡವನ್ನು ಎದುರಿಸಲಿದೆ. ಈಗಾಗಲೇ ತೆಲುಗು ಟೈಟಾನ್ಸ್ ವಿರುದ್ಧ ಜಯಸಾಧಿಸಿ ಆತ್ಮವಿಶ್ವಾಸದಲ್ಲಿರುವ ಬುಲ್ಸ್ ಪಡೆ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ. ಆದರೆ ಈ ಬಾರಿ ಬುಲ್ಸ್ ಪಡೆಗೆ ತವರಿನ ಪ್ರೇಕ್ಷಕರ ಬೆಂಬಲವಿಲ್ಲದೇ ಕಣಕ್ಕಿಳಿಯುತ್ತಿರುವುದು ಒಂದಷ್ಟು ಹಿನ್ನಡೆಯನ್ನುಂಟು ಮಾಡಬಹುದು.ಇನ್ನು ಆಡಿದ ಮೊದಲ ಪಂದ್ಯದಲ್ಲಿಯೇ ತೆಲುಗು ಟೈಟಾನ್ಸ್ ಎದುರು ಮುಗ್ಗರಿಸಿತ್ತು.
ಇನ್ನು 'ಎ' ವಲಯದ ಎರಡನೇ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ತಂಡವು ದಬಾಂಗ್ ಡೆಲ್ಲಿ ವಿರುದ್ಧ ಸೆಣಸಲಿದೆ.
