ಮಾಜಿ ಅಂತರಾಷ್ಟ್ರೀಯ ಕಬಡ್ಡಿ ಪಟು ಹಾಗೂ ಅರ್ಜುನ ಪ್ರಶಸ್ತಿ ವಿಜೇತ ರಣ್'ಧೀರ್ ಸಿಂಗ್ ಮಾರ್ಗದರ್ಶನದಲ್ಲಿ ಈ ಯುವ ತಂಡದ ಆಟಗಾರರು ಈಗಾಗಲೇ ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
ಬೆಂಗಳೂರು(ಜು.16): ಸ್ಟಾರ್ ರೈಡರ್ ರೋಹಿತ್ ಕುಮಾರ್, 5ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್'ನಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಅನುಭವಿ ಡಿಫೆಂಡರ್ ರವೀಂದರ್ ಪೆಹಲ್ ಅವರಿಗೆ ಉಪ ನಾಯಕನ ಜವಾಬ್ದಾರಿ ನೀಡಲಾಗಿದೆ ಎಂದು ವರದಿಯಾಗಿದೆ.
ಇದೇ 28 ರಿಂದ ಆರಂಭವಾಗಲಿರುವ ಕಬಡ್ಡಿ ಲೀಗ್'ನಲ್ಲಿ ಬೆಂಗಳೂರು ತಂಡ ಪ್ರಭಾವಿ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ. ಮಾಜಿ ಅಂತರಾಷ್ಟ್ರೀಯ ಕಬಡ್ಡಿ ಪಟು ಹಾಗೂ ಅರ್ಜುನ ಪ್ರಶಸ್ತಿ ವಿಜೇತ ರಣ್'ಧೀರ್ ಸಿಂಗ್ ಮಾರ್ಗದರ್ಶನದಲ್ಲಿ ಈ ಯುವ ತಂಡದ ಆಟಗಾರರು ಈಗಾಗಲೇ ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
ಕರ್ನಾಟಕದ ಹರೀಶ್ ನಾಯಕ್, ಗುರ್ವೀಂದರ್ ಸಿಂಗ್, ಅಂಕಿತ್ ಸಂಗ್ವಾನ್, ಪ್ರೀತಮ್ ಚಿಲ್ಲಾರ್ ಮತ್ತು ಆಶೀಶ್ ಕುಮಾರ್ ಉತ್ತಮ ಪ್ರದರ್ಶನದ ಭರವಸೆ ಮೂಡಿಸಿದ್ದಾರೆ.
