2013ರಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದ ಈವರೆಗೆ ಐಎಸ್‌ಎಲ್ ಆರು ತಂಡಗಳ ಟೂರ್ನಿಯಾಗಿಯೇ ಚಾಲ್ತಿಯಲ್ಲಿದೆ.

ಬೆಂಗಳೂರು(ನ.15): ಪ್ರತಿಷ್ಠಿತ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕದ ಯಾವುದೇ ತಂಡವಿಲ್ಲ ಎಂಬ ಕೊರಗು ಕನ್ನಡಿಗರನ್ನು ಕಾಡುತ್ತಿತ್ತು. ಇದೀಗ, ಈ ವಿಚಾರದಲ್ಲಿ ಸಿಹಿ ಸುದ್ದಿಯೊಂದು ಬಂದಿದೆ.

ಲೀಗ್‌ನಲ್ಲಿ ಬೆಂಗಳೂರು ಹೆಸರಿನಲ್ಲಿ ತಂಡವೊಂದನ್ನು ಸೇರ್ಪಡೆಗೊಳಿಸಲು ಜಿಂದಾಲ್ ಸ್ಟೀಲ್ ಸಂಸ್ಥೆ (ಜೆಎಸ್‌ಡಬ್ಲ್ಯೂ) ಮುಂದೆ ಬಂದಿದ್ದು 2018ರ ಆವೃತ್ತಿಯಿಂದ ಬೆಂಗಳೂರು ತಂಡವು ಟೂರ್ನಿಯಲ್ಲಿ ಸ್ಥಾನ ಪಡೆಯಲಿದೆ ಎಂದು ಲೀಗ್ ಮುಖ್ಯಸ್ಥ ನರೀಂದರ್ ಬಾತ್ರಾ ತಿಳಿಸಿದ್ದಾರೆ.

2013ರಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದ ಈವರೆಗೆ ಐಎಸ್‌ಎಲ್ ಆರು ತಂಡಗಳ ಟೂರ್ನಿಯಾಗಿಯೇ ಚಾಲ್ತಿಯಲ್ಲಿದೆ.