ನವದೆಹಲಿ: ಆರ್‌'ಸಿಬಿ ಬ್ಯಾಟಿಂಗ್ ಮಾಂತ್ರಿಕ ಎಬಿ ಡಿವಿಲಿಯರ್ಸ್‌, ಶನಿವಾರ ಡೆಲ್ಲಿ ವಿರುದ್ಧ ನಡೆಸಿದ ವಿಸ್ಫೋಟಕ ಬ್ಯಾಟಿಂಗ್, ಐಪಿಎಲ್‌'ನ ದುಬಾರಿ ಆಲ್ರೌಂಡರ್ ಬೆನ್ ಸ್ಟೋಕ್ಸ್‌'ರನ್ನೂ ಬೆಚ್ಚಿಬೀಳಿಸಿದೆ.

ಟ್ವೀಟರ್‌'ನಲ್ಲಿ ರಾಜಸ್ಥಾನ ರಾಯಲ್ಸ್ ಆಟಗಾರ, ವಿಲಿಯರ್ಸ್‌ರನ್ನು ನಿಯಂತ್ರಿಸುವುದು ಹೇಗೆ ಎಂದು ಎಲ್ಲರಿಗೂ ತಿಳಿಸಿದ್ದಾರೆ. 1981ರ ‘ಅಂಡರ್ ಆರ್ಮ್ ಎಸೆತ’ದ ಪ್ರಸಂಗವನ್ನು ಸ್ಟೋಕ್ಸ್ ನೆನಪಿಸಿದ್ದಾರೆ.

ನ್ಯೂಜಿಲೆಂಡ್ ಪಂದ್ಯವನ್ನು ಟೈ ಮಾಡಿಕೊಳ್ಳಲು ಕೊನೆ ಎಸೆತದಲ್ಲಿ 6 ರನ್ ಬೇಕಿತ್ತು. ಆಗ ಆಸ್ಟ್ರೇಲಿಯಾ ನಾಯಕ ಗ್ರೆಗ್ ಚಾಪೆಲ್ ತಮ್ಮ ಸಹೋದರ ಟ್ರೆವರ್ ಚಾಪೆಲ್‌'ಗೆ ಚೆಂಡನ್ನು ನೆಲದಲ್ಲಿ ಉರುಳಿಸುವಂತೆ ಹೇಳಿ, ಬ್ಯಾಟ್ಸ್'ಮನ್‌'ಗೆ ಸಿಕ್ಸರ್ ಬಾರಿಸಲು ಅವಕಾಶ ನಿರಾಕರಿಸಿದ್ದರು. ಆ ರೀತಿ ಮಾಡಿದರೆ ಮಾತ್ರ ವಿಲಿಯರ್ಸ್‌ ಆರ್ಭಟ ತಡೆಯಲು ಸಾಧ್ಯ ಎಂದು ಸ್ಟೋಕ್ಸ್ ಹೇಳಿದ್ದಾರೆ.

ಎಬಿಡಿ ಡೆಲ್ಲಿ ಡೇರ್'ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 39 ಎಸೆತಗಳಲ್ಲಿ 90 ರನ್ ಸಿಡಿಸಿ ಆರ್'ಸಿಬಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.