ನವದೆಹಲಿಯ ಶ್ರೀ ಫೋರ್ಟ್ ಸ್ಪೋರ್ಟ್ಸ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ವೆನ್ ಜಾಂಗ್ ವಿರುದ್ಧ 18-21, 21-11,20-22 ಅಂತರದಲ್ಲಿ ಸೋಲು ಅನುಭವಿಸಿ ಸತತ 2ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವುದನ್ನು ತಪ್ಪಿಸಿಕೊಂಡರು.
ನವದೆಹಲಿ(ಫೆ.04): ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಅಮೆರಿಕಾದ ಬೇ ವೆನ್ ಜಾಂಗ್ ಅವರ ವಿರುದ್ಧ ಇಂಡಿಯನ್ ಓಪನ್ 2018ರ ಮಹಿಳಾ ವಿಭಾಗದ ಫೈನಲ್'ನಲ್ಲಿ ಪರಾಭವಗೊಂಡಿದ್ದಾರೆ.
ನವದೆಹಲಿಯ ಶ್ರೀ ಫೋರ್ಟ್ ಸ್ಪೋರ್ಟ್ಸ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ವೆನ್ ಜಾಂಗ್ ವಿರುದ್ಧ 18-21, 21-11,20-22 ಅಂತರದಲ್ಲಿ ಸೋಲು ಅನುಭವಿಸಿ ಸತತ 2ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವುದನ್ನು ತಪ್ಪಿಸಿಕೊಂಡರು.
ಕಳೆದ ಬಾರಿ ಒಲಿಂಪಿಕ್ ವಿಜೇತೆ ಸ್ಪೇನ್'ನ ಕರೋಲಿನ್ ಮರಿನ್ ಅವರ ವಿರುದ್ಧ 21-10, 21-13 ನೇರ ಸೆಟ್'ಗಳಿಂದ ಗೆಲುವು ಸಾಧಿಸಿದ್ದರು. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದ 22 ವಯಸ್ಸಿನ ಸಿಂಧು 27ರ ಹರೆಯದ ಬೇ ವೆನ್ ಜಾಂಗ್ ವಿರುದ್ಧ ಕಠಿಣ ಸ್ಪರ್ಧೆ ನೀಡಿ ಪರಾಭವಗೊಂಡರು. ಇಬ್ಬರ ನಡುವೆ ಪಂದ್ಯ ಒಂದೂವರೆ ಗಂಟೆಗೂ ಹೆಚ್ಚು ಹೊತ್ತು ಕಾಲ ನಡೆಯಿತು.