ಮೊದಲ ದಿನಾಂತ್ಯದಲ್ಲಿ ಕ್ರೀಸ್‌'ನಲ್ಲಿದ್ದ ವಿರಾಟ್ ಕೊಹ್ಲಿ ಮತ್ತು ರಹಾನೆ 2ನೇ ದಿನದ ಬ್ಯಾಟಿಂಗ್‌'ನಲ್ಲಿ ಕೇವಲ 8 ಓವರ್‌ಗಳನ್ನು ಮಾತ್ರ ಆಡಿದರು. ಬಳಿಕ ನಿವೃತ್ತಿ ಪಡೆದು ಇನ್ನುಳಿದ ಆಟಗಾರರಿಗೆ ಬ್ಯಾಟಿಂಗ್ ಮಾಡಲು ಅವಕಾಶ ಕಲ್ಪಿಸಿದರು.
ಕೊಲಂಬೊ(ಜು.22): ಭಾರತ ಬ್ಯಾಟ್ಸ್'ಮನ್'ಗಳು ಎರಡನೇ ದಿನ ಸಂಪೂರ್ಣ ಪ್ರಾಬಲ್ಯ ಮೆರೆಯುವ ಮೂಲಕ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮತ್ತು ಶ್ರೀಲಂಕಾ ಅಧ್ಯಕ್ಷರ ಇಲೆವೆನ್ ನಡುವಿನ ಎರಡು ದಿನಗಳ ಅಭ್ಯಾಸ ಪಂದ್ಯ ಡ್ರಾದಲ್ಲಿ ಮುಕ್ತಾಯವಾಗಿದೆ.
ಟೀಂ ಇಂಡಿಯಾ ಪರ ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಮತ್ತು ಎಂಟನೇ ವಿಕೆಟ್'ಗೆ ಕ್ರೀಸ್'ಗಳಿದ ಶಿಖರ್ ಧವನ್ ಉತ್ತಮ ಬ್ಯಾಟಿಂಗ್ ನಡೆಸುವ ಮೂಲಕ ಎದುರಾಳಿ ಬೌಲರ್'ಗಳ ಬೆವರಿಳಿಸಿದರು. ಶನಿವಾರ 3 ವಿಕೆಟ್'ಗೆ 135 ರನ್'ಗಳಿಂದ ಮೊದಲ ಇನಿಂಗ್ಸ್ ಮುಂದುವರೆಸಿದ ಪ್ರವಾಸಿ ಭಾರತ ತಂಡ ದಿನಾಂತ್ಯಕ್ಕೆ 9 ವಿಕೆಟ್'ಗೆ 312 ರನ್ ಗಳಿಸಿತು. ಭಾರತದ ಪರ ರಹಾನೆ 40, ರೋಹಿತ್ ಶರ್ಮಾ 38, ಶಿಖರ್ ಧವನ್ 41, ವಿರಾಟ್ ಕೊಹ್ಲಿ 53 ರನ್ ಬಾರಿಸುವ ಮೂಲಕ ಉತ್ತಮವಾಗಿ ಬ್ಯಾಟಿಂಗ್ ಅಭ್ಯಾಸ ನಡೆಸಿದರು.
ಮೊದಲ ದಿನಾಂತ್ಯದಲ್ಲಿ ಕ್ರೀಸ್'ನಲ್ಲಿದ್ದ ವಿರಾಟ್ ಕೊಹ್ಲಿ ಮತ್ತು ರಹಾನೆ 2ನೇ ದಿನದ ಬ್ಯಾಟಿಂಗ್'ನಲ್ಲಿ ಕೇವಲ 8 ಓವರ್ಗಳನ್ನು ಮಾತ್ರ ಆಡಿದರು. ಬಳಿಕ ನಿವೃತ್ತಿ ಪಡೆದು ಇನ್ನುಳಿದ ಆಟಗಾರರಿಗೆ ಬ್ಯಾಟಿಂಗ್ ಮಾಡಲು ಅವಕಾಶ ಕಲ್ಪಿಸಿದರು.
ಶ್ರೀಲಂಕಾ ಅಧ್ಯಕ್ಷರ ಇಲೆವೆನ್ ಮೊದಲ ಇನಿಂಗ್ಸ್ನಲ್ಲಿ 187 ರನ್'ಗಳಿಗೆ ಆಲೌಟ್ ಆಗಿತ್ತು.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ ಮೊದಲ ಇನಿಂಗ್ಸ್ :187/10
(ದನುಷ್ಕಾ 74, ಲಹಿರು 59, ಕುಲ್ದೀಪ್ 14/4)
ಭಾರತ ಮೊದಲ ಇನಿಂಗ್ಸ್ : 312/9
(ಕೊಹ್ಲಿ 53, ಧವನ್ 41, ವಿಶ್ವ ಫೆರ್ನಾಂಡೋ 37/2)
