ಹಾಂಕಾಂಗ್ ಟಿ-20 ಲೀಗ್‌'ನಲ್ಲಿ ಆಡಲು ಈ ಹಿಂದೆ ಅವರಿಗೆ ನೀಡಿದ್ದ ನಿರಾಕ್ಷೇಪಣಾ ಪತ್ರವನ್ನು ಬಿಸಿಸಿಐ ಹಿಂಪಡೆದುಕೊಂಡಿದೆ.
ಮುಂಬೈ (ಫೆ.16): ಟೀಂ ಇಂಡಿಯಾ ಕ್ರಿಕೆಟ್ ತಂಡದ ಆಲ್'ರೌಂಡರ್ ಯೂಸೂಫ್ ಪಠಾಣ್ ಆಸೆಗೆ ಬಿಸಿಸಿಐ ತಣ್ಣೀರೆರೆಚಿದೆ.
ಹಾಂಕಾಂಗ್ ಟಿ-20 ಲೀಗ್'ನಲ್ಲಿ ಆಡಲು ಈ ಹಿಂದೆ ಅವರಿಗೆ ನೀಡಿದ್ದ ನಿರಾಕ್ಷೇಪಣಾ ಪತ್ರವನ್ನು ಬಿಸಿಸಿಐ ಹಿಂಪಡೆದುಕೊಂಡಿದೆ.
ಕಳೆದ ಕೆಲ ದಿನಗಳ ಹಿಂದೆ ಹಾಂಕಾಂಗ್ ಟಿ-20 ಲೀಗ್'ನಲ್ಲಿ ಆಡಲು ಪಠಾಣ್'ಗೆ ಒಪ್ಪಿಗೆ ಪತ್ರ ನೀಡಿತ್ತು. ಆದರೆ ಇದಾದ ಕೆಲ ದಿನಗಳ ಬಳಿಕ ಟೀಂ ಇಂಡಿಯಾ ಕ್ರಿಕೆಟ್ ತಂಡದ ಕೆಲ ಆಟಗಾರರು ವಿದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಆಡಲು ಆಸಕ್ತಿ ವಹಿಸಿ ಬಿಸಿಸಿಐಗೆ ಪತ್ರ ಬರೆದಿರುವ ಕಾರಣಕ್ಕಾಗಿ ಇವರಿಗೆ ನೀಡಿದ ಎನ್'ಒಸಿ ಹಿಂಡೆದುಕೊಳ್ಳಲಾಗಿದೆ ಎನ್ನಲಾಗಿದೆ.
