ಲಲಿತ್ ಮೋದಿಯವರ ಭಾರತ ಕಚೇರಿಗೆ ಬಿಸಿಸಿಐ ಕರೆ ಮಾಡಿ ,ಡೊಮೈನ್ ನವೀಕರಿಸುವಂತೆ ಹೇಳಿದ ಬಳಿಕ, ವೆಬ್'ಸೈಟ್ ಪುನರ್ ಆರಂಭಗೊಂಡಿತು.

ಮುಂಬೈ(ಫೆ.06): ಬಿಸಿಸಿಐ ವೆಬ್'ಸೈಟ್ ಸ್ಥಗಿತಗೊಳ್ಳಲು, ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ.

Add Asianetnews Kannada as a Preferred SourcegooglePreferred

ಡೊಮೈನ್ ನವೀಕರಣ ಮಾಡದ ಕಾರಣ ಭಾನುವಾರ ಬಿಸಿಸಿಐ ವೆಬ್'ಸೈಟ್ ಕೆಲ ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಬಿಸಿಸಿಐನ ಡೊಮೈನ್ ಮಾಲೀಕತ್ವ, ಬಿಸಿಸಿಐನಿಂದ ಉಚ್ಛಾಟಿಸಲ್ಪಟ್ಟಿರುವ ಲಲಿತ್ ಮೋದಿ ಹೆಸರಿನಲ್ಲಿದೆ. ವೆಬ್'ಸೈಟ್ ಮಾಲೀಕತ್ವದ ವಿಚಾರ ನ್ಯಾಯಾಲಯದಲ್ಲಿದ್ದು, ಪ್ರಕರಣ ಇತ್ಯರ್ಥವಾಗುವವರೆಗೂ ಲಲಿತ್ ಮೋದಿಯೇ ಡೊಮೈನ್ ನವೀಕರಿಸಬೇಕು ಎಂದು ಆದೇಶಿಸಲಾಗಿತ್ತು.

ಲಲಿತ್ ಮೋದಿಯವರ ಭಾರತ ಕಚೇರಿಗೆ ಬಿಸಿಸಿಐ ಕರೆ ಮಾಡಿ ,ಡೊಮೈನ್ ನವೀಕರಿಸುವಂತೆ ಹೇಳಿದ ಬಳಿಕ, ವೆಬ್'ಸೈಟ್ ಪುನರ್ ಆರಂಭಗೊಂಡಿತು.