ಆಫ್ಘಾನ್ ಟೆಸ್ಟ್’ಗೆ ಕೊಹ್ಲಿ ಗೈರು; ಬಿಸಿಸಿಐ ಗರಂ..!

BCCI wants Virat Kohli to prioritise Afghanistan Test ahead of county stint
Highlights

‘ಇಂಗ್ಲೆಂಡ್‌ನಿಂದ ಬಂದು ಆಫ್ಘಾನಿಸ್ತಾನ ವಿರುದ್ಧ ಟೆಸ್ಟ್‌'ನಲ್ಲಿ ಭಾಗವಹಿಸಿ ಬಳಿಕ ಕೊಹ್ಲಿ ಇಂಗ್ಲೆಂಡ್‌'ಗೆ ವಾಪಸಾಗಬಹುದು. ಇಂಗ್ಲೆಂಡ್ ಪ್ರವಾಸಕ್ಕೆ ಸಿದ್ಧತೆ ನಡೆಸಲು ಕೌಂಟಿಯಲ್ಲಿ ಆಡಬೇಕಿದ್ದರೆ, ಕೊಹ್ಲಿ ಐಪಿಎಲ್ ಬಿಟ್ಟು ಈಗಲೇ ಹೊಗಬಹುದಿತ್ತಲ್ಲಾ’ ಎಂದು ಬಿಸಿಸಿಐ ಅಧಿಕಾರಿ ಪ್ರಶ್ನಿಸಿದ್ದಾರೆ. 

ಮುಂಬೈ(ಏ.28]: ವಿರಾಟ್ ಕೊಹ್ಲಿ ಆಫ್ಘಾನಿಸ್ತಾನ ವಿರುದ್ಧ ಜೂನ್ 14ರಿಂದ ನಡೆಯಲಿರುವ ಟೆಸ್ಟ್ ಪಂದ್ಯಕ್ಕೆ ಗೈರಾಗುವ ವಿಚಾರದಲ್ಲಿ ಬಿಸಿಸಿಐನಲ್ಲಿ ಅಪಸ್ವರ ಶುರುವಾಗಿದೆ. ಐತಿಹಾಸಿಕ ಪಂದ್ಯಕ್ಕೆ ನಾಯಕನೇ ಗೈರಾದರೆ ಪ್ರವಾಸಿ ಆಫ್ಘಾನಿಸ್ತಾನಕ್ಕೆ ಅವಮಾನಿಸಿದಂತಾಗುತ್ತದೆ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.

‘ಇಂಗ್ಲೆಂಡ್‌ನಿಂದ ಬಂದು ಆಫ್ಘಾನಿಸ್ತಾನ ವಿರುದ್ಧ ಟೆಸ್ಟ್‌ನಲ್ಲಿ ಭಾಗವಹಿಸಿ ಬಳಿಕ ಕೊಹ್ಲಿ ಇಂಗ್ಲೆಂಡ್‌'ಗೆ ವಾಪಸಾಗಬಹುದು. ಇಂಗ್ಲೆಂಡ್ ಪ್ರವಾಸಕ್ಕೆ ಸಿದ್ಧತೆ ನಡೆಸಲು ಕೌಂಟಿಯಲ್ಲಿ ಆಡಬೇಕಿದ್ದರೆ, ಕೊಹ್ಲಿ ಐಪಿಎಲ್ ಬಿಟ್ಟು ಈಗಲೇ ಹೊಗಬಹುದಿತ್ತಲ್ಲಾ’ ಎಂದು ಬಿಸಿಸಿಐ ಅಧಿಕಾರಿ ಪ್ರಶ್ನಿಸಿದ್ದಾರೆ. 

ಆದರೆ ಕೊಹ್ಲಿ ಸೇರಿ 7-8 ಮಂದಿ ಟೆಸ್ಟ್ ತಜ್ಞರು ಮುಂಚಿತವಾಗಿಯೇ ಇಂಗ್ಲೆಂಡ್ ತೆರಳಲು ಸುಪ್ರೀಂ ಕೋರ್ಟ್ ನೇಮಿತ ಬಿಸಿಸಿಐ ಆಡಳಿತ ಸಮಿತಿ ಸಮ್ಮತಿ ಸೂಚಿಸಿದೆ ಎನ್ನಲಾಗಿದೆ.

loader