ನ್ಯಾ. ಲೋಧಾ ಸಮಿತಿಯ ಶಿಫಾರಸ್ಸುಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಡಿ.14 ರವರೆಗೆ ಮುಂದೂಡಿದೆ. ಅಲ್ಲಿಯ ತನಕ ಇಷ್ಟವಿರಲಿ, ಇಲ್ಲದಿರಲಿ ಸಮಿತಿಯ ಶಿಫಾರಸುಗಳನ್ನು ಬಿಸಿಸಿಐ ಒಪ್ಪಿಕೊಳ್ಳಬೇಕು ಎಂದು  ಹೇಳಿದೆ.

ನವದೆಹಲಿ (ಡಿ.09): ನ್ಯಾ. ಲೋಧಾ ಸಮಿತಿಯ ಶಿಫಾರಸ್ಸುಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಡಿ.14 ರವರೆಗೆ ಮುಂದೂಡಿದೆ. ಅಲ್ಲಿಯ ತನಕ ಇಷ್ಟವಿರಲಿ, ಇಲ್ಲದಿರಲಿ ಸಮಿತಿಯ ಶಿಫಾರಸ್ಸುಗಳನ್ನು ಬಿಸಿಸಿಐ ಒಪ್ಪಿಕೊಳ್ಳಬೇಕು ಎಂದು ಹೇಳಿದೆ.

ಕ್ರಿಕೆಟ್ ಮಂಡಳಿಯ ಆಡಳಿತವು ಸಂಪೂರ್ಣ ಪಾರದರ್ಶಕವಾಗಿರಬೇಕೆಂಬ ಸಲುವಾಗಿ ನ್ಯಾ.ಲೋಧಾ ಸಮಿತಿ ಮಾಡಿರುವ ಶಿಫಾರಸುಗಳ ಪೈಕಿ ಕೆಲವೊಂದು ಪ್ರಮುಖ ಅಂಶಗಳನ್ನೇ ಬಿಸಿಸಿಐ ಧಿಕ್ಕರಿಸುತ್ತಾ ಬಂದಿದ್ದು ಇದರ ವಿರುದ್ಧ

ಕೆಂಡಾಮಂಡಲವಾಗಿರುವ ಲೋಧಾ ಸಮಿತಿ ಬಿಸಿಸಿಐ ಹಾಗೂ ರಾಜ್ಯ ಕ್ರಕೆಟ್ ಸಂಸ್ಥೆಗಳ ಪದಾಧಿಕಾರಿಗಳನ್ನು ವಜಾಗೊಳಿಸಬೇಕೆಂದು ನ್ಯಾಯಾಲಯವನ್ನು ಕೋರಿದೆ. ಕಳೆದ ತಿಂಗಳು ನಡೆದ ಬಿಸಿಸಿಐ ವಿಶೇಷ ಸಬೆಯಲ್ಲಿ ಲೋಧಾ ಸಮಿತಿಯ

ಶಿಫಾರಸುಗಳನ್ನು ಅನುಷ್ಠಾನಕ್ಕೆ ತರದಿರಲು ಒಮ್ಮತದ ನಿರ್ಧಾರ ತಳೆಯಲಾಗಿತ್ತು. 

ಆದೇಶ ನೀಡಿದ 2 ವಾರದೊಳಗೆ ಲೋಧಾ ಸಮಿತಿಯನ್ನು ಭೇಟಿ ಮಾಡಿ ಅಫಿಡವಿಟ್ ಸಲ್ಲಿಸಿ ಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹಾಗೂ ಅಜಯ್ ಶಿರ್ಕೆ ಅವರಿಗೆ ಸುಪ್ರೀಂ ಸೂಚಿಸಿತ್ತು.

ಇವತ್ತು ವಿಚಾರಣೆ ನಡೆಸಿದ ನ್ಯಾಯಾಲಯ 3 ನೇ ಬಾರಿಗೆ ವಿಚಾರಣೆಯನ್ನು ಮುಂದೂಡಿದೆ.