‘‘ಭಾರತೀಯ ಕ್ರಿಕೆಟ್‌'ಗೆ ಕುಂಬ್ಳೆ ಕೊಡುಗೆ ಅಪಾರವಾದ ದ್ದಾಗಿದೆ. ಅದನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ಹಾಗಂದ ಮಾತ್ರಕ್ಕೆ ಕ್ರಿಕೆಟ್‌ ಮಂಡಳಿಯನ್ನು ಮೀರಿ, ಅಧಿಕಾರವಿರುವವರನ್ನು ಸದಾ ಸಂಪರ್ಕಿಸುವ ಮೂಲಕ ಕುಂಬ್ಳೆ ತಪ್ಪು ಮಾಡಿದ್ದಾರೆ'' ಎಂದು ಅವರು ಹೇಳಿದ್ದಾರೆ.
ನವದೆಹಲಿ(ಮೇ.07): ಪ್ರತಿ ಬಾರಿ ಎಲ್ಲಾ ಸಮಸ್ಯೆಗಳಿಗೂ ಆಡಳಿತ ಮಂಡಳಿ ಬಾಗಿಲು ತಟ್ಟುವ ಭಾರತ ತಂಡದ ಕೋಚ್ ಅನಿಲ್ ಕುಂಬ್ಳೆ ವರ್ತನೆ, ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಭಾಗವಹಿಸಬೇಕು ಎಂದು ಆಡಳಿತ ಮಂಡಳಿಯ ಜತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ‘‘ಅವರು ಸರಿಯಾದ ದಾರಿಯಲ್ಲಿ ಸಾಗುತ್ತಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ. ಯಾವುದೇ ವ್ಯಕ್ತಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಅದಕ್ಕೊಂದು ನೀತಿ, ನಿಯಮವಿದೆ. ಅದನ್ನು ಕುಂಬ್ಳೆ ಉಲ್ಲಂಘಿಸುತ್ತಿದ್ದಾರೆ. ತಮಗೆ ಸಂಬಂಧಪಡದ ವಿಚಾರಗಳಲ್ಲಿ ಮೂಗು ತೂರಿಸುವುದು ಸರಿಯಲ್ಲ. ಹಾಗೂ ಇದನ್ನು ಬಿಸಿಸಿಐ ಸಹಿಸುವುದಿಲ್ಲ'' ಎಂದು ಹೇಳಿದ್ದಾರೆ.
‘‘ಭಾರತೀಯ ಕ್ರಿಕೆಟ್'ಗೆ ಕುಂಬ್ಳೆ ಕೊಡುಗೆ ಅಪಾರವಾದ ದ್ದಾಗಿದೆ. ಅದನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ಹಾಗಂದ ಮಾತ್ರಕ್ಕೆ ಕ್ರಿಕೆಟ್ ಮಂಡಳಿಯನ್ನು ಮೀರಿ, ಅಧಿಕಾರವಿರುವವರನ್ನು ಸದಾ ಸಂಪರ್ಕಿಸುವ ಮೂಲಕ ಕುಂಬ್ಳೆ ತಪ್ಪು ಮಾಡಿದ್ದಾರೆ'' ಎಂದು ಅವರು ಹೇಳಿದ್ದಾರೆ.
