ನವದೆಹಲಿ(ಸೆ.12): ಟೀಂ ಇಂಡಿಯಾದ 500ನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಐಸಿಸಿಗೆ ಆಹ್ವಾನವಿಲ್ಲ ಎಂದು ಬಿಸಿಸಿಐ ಹೇಳಿದೆ. ಇದನ್ನು ಗಮನಿಸಿದರೆ, ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಮುಸುಕಿನ ಗುದ್ದಾಟ ಮತ್ತೊಂದು ತಿರುವು ಪಡೆದಿದೆ.

ಐಸಿಸಿ ‘‘ಟೂ ಟೈರ್’’ ಟೆಸ್ಟ್ ವ್ಯವಸ್ಥೆ ಆಯೋಜನೆಗೆ ಉತ್ಸುಕವಾಗಿದ್ದರೆ, ಬಿಸಿಸಿಐ ಅದನ್ನು ವಿರೋಧಿಸುತ್ತಿದೆ. ಎಲ್ಲಾ ಐಸಿಸಿ ವಿರುದ್ಧದ ನಿರ್ಣಯಗಳನ್ನು ಬಿಸಿಸಿಐ ತೆಗೆದುಕೊಳ್ಳುತ್ತಿರುವುದು ಸಮಸ್ಯೆ ಉಲ್ಬಣಿಸುವ ಲಕ್ಷಣ ತೋರಿದೆ.

ಇದೇ 22ರಂದು ಭಾರತ ತಂಡ, ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ಆಡುತ್ತಿದೆ. ಈ ಸರಣಿಯ ಮೊದಲ ಪಂದ್ಯ ಕಾನ್ಪುರದಲ್ಲಿ ನಡೆಯಲಿದ್ದು, ಇದೇ ಭಾರತದ 500ನೇ ಟೆಸ್ಟ್ ಪಂದ್ಯವಾಗಿದೆ.