Asianet Suvarna News Asianet Suvarna News

ಪಾಕಿಸ್ತಾನದಲ್ಲಿ ನಡೆದ ಎಸಿಸಿ ಸಭೆಗೆ ಬಿಸಿಸಿಐ ಗೈರು!

ಪಾಕಿಸ್ತಾನದ ಲಾಹೋರ್‌ನಲ್ಲಿ ಆಯೋಜಿಸಿದ್ದ ವಾರ್ಷಿಕ ಸಾಮಾನ್ಯ ಸಭೆಗೆ ಬಿಸಿಸಿಐ ಗೈರಾಗಿದೆ. 33 ದೇಶಗಳು ಸಭೆಯಲ್ಲಿ ಪಾಲ್ಗೊಂಡಿದ್ದರೆ, ಬಿಸಿಸಿಐ ಮಾತ್ರ ಗೈರಾಗಿತ್ತು. ಅಷ್ಟಕ್ಕೂ ಬಿಸಿಸಿಐ ಸಭೆಗೆ ಗೈರಾಗಿದ್ದೇಕೆ? ಇಲ್ಲಿದೆ ಹೆಚ್ಚಿನ ವಿವರ.
 

BCCI skips Asian Cricket Council meeting in Lahore due to security concerns
Author
Bengaluru, First Published Nov 19, 2018, 10:40 AM IST

ಕರಾಚಿ(ನ.19): ಏಷ್ಯನ್ ಕ್ರಿಕೆಟ್ ಸಮಿತಿ(ಎಸಿಸಿ), ಶನಿವಾರ ಲಾಹೋರ್‌ನಲ್ಲಿ ಆಯೋಜಿಸಿದ್ದ ವಾರ್ಷಿಕ ಸಾಮಾನ್ಯ ಸಭೆಗೆ ಬಿಸಿಸಿಐ, ಭದ್ರತೆ ಹಾಗೂ ರಾಜತಾಂತ್ರಿಕ
ಸಮಸ್ಯೆಯ ಕಾರಣ ಒಡ್ಡಿ ತನ್ನ ಪ್ರತಿನಿಧಿಯನ್ನು ಕಳುಹಿಸರಲಿಲ್ಲ. ಇದೇ ಸಭೆಯಲ್ಲಿ ಎಸಿಸಿಯ ನೂತನ ಅಧ್ಯಕ್ಷರಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ)
ಮುಖ್ಯಸ್ಥ ನಜ್ಮುಲ್ ಹಸನ್, 2 ವರ್ಷಗಳ ಅವಧಿಗೆ ಆಯ್ಕೆಯಾಗಿದ್ದಾರೆ. 

‘ರಾಜತಾಂತ್ರಿಕ ಸಮಸ್ಯೆಗಳಿಂದ ಎಸಿಸಿ ಸಭೆ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಬಿಸಿಸಿಐ, ಪಿಸಿಬಿ ಮೊದಲೇ ತಿಳಿಸಿತ್ತು’ ಎಂದು ಪಿಸಿಬಿ ಮೂಲಗಳು ತಿಳಿಸಿವೆ. ಬಿಸಿಸಿಐ ಎಸಿಸಿ ಸಭೆಯಲ್ಲಿ ಭಾರತವೊಂದನ್ನು ಬಿಟ್ಟು ಉಳಿದ ಎಲ್ಲ 33 ದೇಶಗಳ ಪ್ರತಿನಿಧಿಗಳು ಹಾಗೂ ಐಸಿಸಿಯ ಸಿಇಒ ಡೇವಿಡ್ ರಿಚರ್ಡ್ಸ್‌ನ್ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು.

ಬಿಸಿಸಿಐ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕಾನೂನು ಹೋರಾಟ ನಡೆಸುತ್ತಿದೆ. ಒಪ್ಪಂದದ ಪ್ರಕಾರ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸರಣಿ ಆಯೋಜನೆ ಮಾಡಲು ಬಿಸಿಸಿಐ ಮುಂದಾಗುತ್ತಿಲ್ಲ. ಹೀಗಾಗಿ ನಷ್ಟ ಭರಿಸಿಕೊಡಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿ ಮೆಟ್ಟಿಲೇರಿದೆ. ಈ ಕಾರಣದಿಂದ ಬಿಸಿಸಿಐ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಗೆ ಗೈರಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ.

 

Follow Us:
Download App:
  • android
  • ios