ಇದೀಗ ಐಸಿಸಿ ಮುಂದಿನ ವರ್ಷದಿಂದ ಚಾಂಪಿಯನ್ಸ್ ಟ್ರೋಫಿ ಆಯೋಜಿಸುವುದಿಲ್ಲ ಎಂದಿರುವುದು ಬಿಸಿಸಿಐ ಆಶಯಕ್ಕೆ ರೆಕ್ಕೆಪುಕ್ಕ ಬಂದಂತಾಗಿದೆ.

ಮುಂಬೈ(ಜೂ.28): ಮಿನಿ ಐಪಿಎಲ್ ಆಯೋಜನೆಗೆ ಬಿಸಿಸಿಐ ಒಲವು ವ್ಯಕ್ತಪಡಿಸಿದ್ದು, ದುಬೈನಲ್ಲಿ ಪಂದ್ಯಾವಳಿ ಆಯೋಜನೆ ಮಾಡಲು ಉತ್ಸುಕವಾಗಿದೆ ಎಂದು ವರದಿಯಾಗಿದೆ.

ಈ ಮೊದಲು ಸಹ ಬಿಸಿಸಿಐ, ಮಿನಿ ಐಪಿಎಲ್ ಆಯೋಜನೆ ಮಾಡುವ ಕುರಿತಂತೆ ಆಶಯ ವ್ಯಕ್ತಪಡಿಸಿತ್ತಾದರೂ ಕೆಲ ಸಮಯದಿಂದ ಈ ಕುರಿತು ಮಾತನಾಡಿರಲಿಲ್ಲ.

ಇದೀಗ ಐಸಿಸಿ ಮುಂದಿನ ವರ್ಷದಿಂದ ಚಾಂಪಿಯನ್ಸ್ ಟ್ರೋಫಿ ಆಯೋಜಿಸುವುದಿಲ್ಲ ಎಂದಿರುವುದು ಬಿಸಿಸಿಐ ಆಶಯಕ್ಕೆ ರೆಕ್ಕೆಪುಕ್ಕ ಬಂದಂತಾಗಿದೆ. ‘ಮಿನಿ ಐಪಿಎಲ್ ಯೋಜನೆ ಕೈಬಿಟ್ಟಿರಲಿಲ್ಲ’ ಎಂದು ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ.

ಇದೇ ವೇಳೆ ಮುಂದಿನ 10 ವರ್ಷಗಳಲ್ಲಿ ಐಪಿಎಲ್ ರೂಪುರೇಷೆಯಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ ಎಂದು ಸೂಚನೆ ಸಹ ನೀಡಿದ್ದಾರೆ.