Asianet Suvarna News Asianet Suvarna News

2019ರ ವಿಶ್ವಕಪ್‌ಗೂ ಮೊದಲು ಕೊಹ್ಲಿ, ಬುಮ್ರಾಗೆ ರೆಸ್ಟ್?

2019ರ ವಿಶ್ವಕಪ್ ಟೂರ್ನಿಗೂ ಮುನ್ನ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾ ಕೆಲ ಕ್ರಿಕೆಟರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ಮುಂದಾಗಿದೆ. ಹಾಗಾದರೆ ರೆಸ್ಟ್ ಪಡೆಯಲಿರುವ ಕ್ರಿಕೆಟಿಗರು ಯಾರು? ಇಲ್ಲಿದೆ

BCCI plan to give rest for few team India players before 2019 world cup
Author
Bengaluru, First Published Oct 8, 2018, 5:35 PM IST
  • Facebook
  • Twitter
  • Whatsapp

ಮುಂಬೈ(ಅ.08): ಸತತ ಟೂರ್ನಿ ಆಡುತ್ತಿರುವ ಟೀಂ ಇಂಡಿಯಾ ಇನ್ನು 8 ತಿಂಗಳಲ್ಲೇ ಪ್ರತಿಷ್ಠಿತ 2019ರ ವಿಶ್ವಕಪ್ ಟೂರ್ನಿ ಆಡಲಿದೆ. ವೆಸ್ಟ್ಇಂಡೀಸ್ ಸರಣಿ ಬಳಿಕ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಐಪಿಎಲ್ ಟೂರ್ನಿ ಆಡಲಿದೆ. ಇದರ ಬೆನ್ನಲ್ಲೇ ವಿಶ್ವಕಪ್ ಟೂರ್ನಿ ಆಡಬೇಕಿದೆ.

ಸತತ ಟೂರ್ನಿಯಿಂದಾಗಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ಮುಂದಾಗಿದೆ. ನಿಧಾಸ್ ಟ್ರೋಫಿ, ಏಷ್ಯಾಕಪ್ ಟೂರ್ನಿಯಿಂದ ವಿಶ್ರಾಂತಿ ಪಡೆದಿದ್ದ ನಾಯಕ ವಿರಾಟ್ ಕೊಹ್ಲಿ ಸದ್ಯ ವಿಂಡೀಸ್ ವಿರುದ್ಧದ ಸರಣಿ ಆಡುತ್ತಿದ್ದಾರೆ. 

ಸತತ ಕ್ರಿಕೆಟ್‌ನಿಂದ ಕೊಹ್ಲಿ ಸೇರಿದಂತೆ ಕೆಲ ಕ್ರಿಕೆಟಿಗರಿಗೆ ವಿಶ್ವಕಪ್ ಟೂರ್ನಿಗೂ ಮುನ್ನ ವಿಶ್ರಾಂತಿ ಸಿಗಲಿದೆ. ಆಸ್ಟ್ರೇಲಿಯಾ ಅಥವಾ ನ್ಯೂಜಿಲೆಂಡ್ ವಿರುದ್ಧದ ನಿಗಧಿತ ಓವರ್ ಕ್ರಿಕೆಟ್‌ನಿಂದ ವಿಶ್ರಾಂತಿ ನೀಡಲು ಬಿಸಿಸಿಐ ಮುಂದಾಗಿದೆ. 

ನಾಯಕ ವಿರಾಟ್ ಕೊಹ್ಲಿ, ವೇಗಿಗಳಾದ ಜಸ್‌ಪ್ರೀತ್ ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್‌ಗೆ ಕೆಲ ಪಂದ್ಯಗಳಿಂದ ವಿಶ್ರಾಂತಿ ಸಿಗಲಿದೆ. ಆದರೆ ಈ ಮೂವರು ಕ್ರಿಕೆಟಿಗರು ಐಪಿಎಲ್ ಆಡುವ ಸಾಧ್ಯತೆ ಹೆಚ್ಚಿದೆ.
 

Follow Us:
Download App:
  • android
  • ios