883 ಏಕದಿನ, 553 ಟಿ20, 469 (4 ದಿನಗಳ) ಪಂದ್ಯಗಳು, 9 (5 ದಿನಗಳ) ಪಂದ್ಯಗಳು ನಡೆದಿವೆ. ಭಾರತದ 155 ನಗರಗಳು ಪಂದ್ಯಗಳಿಗೆ ಆತಿಥ್ಯ ವಹಿಸಿವೆ. ಋುತುವಿನಲ್ಲಿ 254 ದಿನಗಳ ಕಾಲ ಪಂದ್ಯಗಳು ನಡೆದಿದ್ದು, 4600ಕ್ಕೂ ಹೆಚ್ಚು ಆಟಗಾರರಿಗೆ ಆಡುವ ಹನ್ನೊಂದರಲ್ಲಿ ಸ್ಥಾನ ಸಿಕ್ಕಿದೆ.
ನವದೆಹಲಿ[ಏ.06]: 2018-19ರ ಋುತುವಿನಲ್ಲಿ ಬರೋಬ್ಬರಿ 2024 ಪಂದ್ಯಗಳನ್ನು ಆಯೋಜಿಸಿ ಬಿಸಿಸಿಐ ದಾಖಲೆ ಬರೆದಿದೆ. 2017-18ರ ಋುತುವಿಗೆ ಹೋಲಿಸಿದರೆ (1108 ಪಂದ್ಯಗಳು), 916 ಅಧಿಕ ಪಂದ್ಯಗಳು ನಡೆದಿವೆ.
ಈ ಅಂಕಿ-ಅಂಶಗಳನ್ನು ಬಿಸಿಸಿಐ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಎಲ್ಲಾ ವಯೋಮಿತಿಯ ಪಂದ್ಯಗಳು ಪರಿಗಣಿಸಲಾಗಿದೆ. 883 ಏಕದಿನ, 553 ಟಿ20, 469 (4 ದಿನಗಳ) ಪಂದ್ಯಗಳು, 9 (5 ದಿನಗಳ) ಪಂದ್ಯಗಳು ನಡೆದಿವೆ. ಭಾರತದ 155 ನಗರಗಳು ಪಂದ್ಯಗಳಿಗೆ ಆತಿಥ್ಯ ವಹಿಸಿವೆ. ಋುತುವಿನಲ್ಲಿ 254 ದಿನಗಳ ಕಾಲ ಪಂದ್ಯಗಳು ನಡೆದಿದ್ದು, 4600ಕ್ಕೂ ಹೆಚ್ಚು ಆಟಗಾರರಿಗೆ ಆಡುವ ಹನ್ನೊಂದರಲ್ಲಿ ಸ್ಥಾನ ಸಿಕ್ಕಿದೆ.
2018-19ರ ಅವಧಿಯಲ್ಲಿ ಉತ್ತರಾಖಂಡ, ಪಾಂಡಿಚೆರಿ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಸಿಕ್ಕಿಂ, ಅರುಣಾಚಲ ಪ್ರದೇಶ ಹಾಗೂ ಮಿಜೋರಾಂ ತಂಡಗಳು ರಣಜಿ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದವು. ಇನ್ನು 18 ವರ್ಷಗಳ ಬಳಿಕ ಬಿಹಾರ ತಂಡ ಕೂಡಾ ಕಮ್’ಬ್ಯಾಕ್ ಮಾಡಿತ್ತು.
