ಕೆಲದಿನಗಳ ಹಿಂದಿನಿಂದಲು ಬಿಸಿಸಿಐ ಹಾಗೂ ಐಸಿಸಿ ನಡುವೆ ಬಿಗ್ ತ್ರೀ ರಾಷ್ಟ್ರಗಳ ವಿಚಾರಗಳಿಗೆ ಸಂಬಂಧಿಸಿದಂತೆ ವೈಮನಸ್ಸು ಸೃಷ್ಟಿಯಾಗಿತ್ತು.

ಮುಂಬೈ(ಫೆ.04): ಇದೇ ಜೂನ್‌'ನಲ್ಲಿ ಇಂಗ್ಲೆಂಡ್‌'ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಿಂದ ಭಾರತ ಹಿಂದೆ ಸರಿಯುವುದಿಲ್ಲ ಎಂದು ಬಿಸಿಸಿಐನ ನೂತನ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಸ್ಪಷ್ಟಪಡಿಸಿದ್ದಾರೆ.

‘‘ಗಾಸಿಪ್‌ಗಳಿಗೆ ನಾನು ಉತ್ತರಿಸಲು ಸಿದ್ಧನಿಲ್ಲ. ಭಾರತ ಕ್ರಿಕೆಟ್ ತಂಡ ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯುವುದು ಹೇಗೆ ಸಾಧ್ಯ? ಭಾರತದ ಜನತೆಗೆ ಭಾರತ ತಂಡ ಟೂರ್ನಿಯಲ್ಲಿ ಆಡಬೇಕು ಎನ್ನುವ ಆಶಯವಿದೆ. ಟೂರ್ನಿಯಲ್ಲಿ ಭಾಗವಹಿಸದೆ ಇರುವುದರಿಂದ ನಾವು ಅತಿ ದೊಡ್ಡ ನಷ್ಟವನ್ನು ಅನುಭವಿಸುತ್ತೇವೆ. ಇದಕ್ಕೆಲ್ಲಾ ಆಸ್ಪದ ನೀಡುವುದಿಲ್ಲ’’ ಎಂದು ವಿನೋದ್ ರಾಯ್ ಬೆಂಗಳೂರು ಮಿರರ್‌ಗೆ ಹೇಳಿಕೆ ನೀಡಿದ್ದಾರೆ ಎಂದು ಸ್ಪೋರ್ಟ್ಸ್ ಕೀಡಾ ವರದಿ ಮಾಡಿದೆ.

ಕೆಲದಿನಗಳ ಹಿಂದಿನಿಂದಲು ಬಿಸಿಸಿಐ ಹಾಗೂ ಐಸಿಸಿ ನಡುವೆ ಬಿಗ್ ತ್ರೀ ರಾಷ್ಟ್ರಗಳ ವಿಚಾರಗಳಿಗೆ ಸಂಬಂಧಿಸಿದಂತೆ ವೈಮನಸ್ಸು ಸೃಷ್ಟಿಯಾಗಿತ್ತು. ಹೀಗಾಗಿ ಟೀಂ ಇಂಡಿಯಾ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸೋದು ಅನುಮಾನ ಎಂದು ಮಾದ್ಯಮಗಳಲ್ಲಿ ವರದಿಯಾಗಿತ್ತು.