ಕಾವೇರಿ ಕಿಚ್ಚು : ಐಪಿಎಲ್ ಪಂದ್ಯಗಳಿಗೆ ಪೆಟ್ಟು

sports | Wednesday, April 11th, 2018
Suvarna Web Desk
Highlights

ಚೆನ್ನೈನಲ್ಲಿ ನಡೆಯುವ ಪಂದ್ಯಗಳು ವಿಶಾಖಪಟ್ಟಣ, ತಿರುವನಂತಪುರ, ಪುಣೆ ಹಾಗೂ ರಾಜ್'ಕೋಟ್ ಕ್ರೀಡಾಂಗಣಗಳಲ್ಲಿ ಸ್ಥಳಾಂತರಗೊಳ್ಳಲಿವೆ.

ಚೆನ್ನೈ(ಏ.11): ತಮಿಳುನಾಡಿನಲ್ಲಿ ಕಾವೇರಿ ಕಿಚ್ಚು ಹೆಚ್ಚಾಗಿರುವ ಕಾರಣದಿಂದ ಚೆನ್ನೈ'ನಲ್ಲಿ ನಡೆಯುವ ಐಪಿಎಲ್ 11ನೇ ಆವೃತ್ತಿಯ ಪಂದ್ಯಗಳು ಸ್ಥಳಾಂತರಗೊಳ್ಳಲಿವೆ.

ಆಡಳಿತಾಧಿಕಾರಿಗಳ ಮಂಡಳಿ ಸಮಿತಿಯ ಮುಖ್ಯಸ್ಥರಾದ  ವಿನೋದ್ ರಾಯ್ ಈ ಬಗ್ಗೆ ಮಾಹಿತಿ ನೀಡಿದ್ದು, ಚೆನ್ನೈನಲ್ಲಿ ನಡೆಯುವ ಪಂದ್ಯಗಳು ವಿಶಾಖಪಟ್ಟಣ, ತಿರುವನಂತಪುರ, ಪುಣೆ ಹಾಗೂ ರಾಜ್'ಕೋಟ್ ಕ್ರೀಡಾಂಗಣಗಳಲ್ಲಿ ಸ್ಥಳಾಂತರಗೊಳ್ಳಲಿವೆ.

ಹಲವು ಸಂಘಟನೆಗಳು ಪಂದ್ಯಗಳಿಗೆ ತೊಂದರೆ ನೀಡುವ ಬಗ್ಗೆ ಬೆದರಿಕೆ ನೀಡುವ ಕಾರಣದಿಂದ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ. ನಿನ್ನೆ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ರವೀಂದ್ರ ಜಡೇಜಾ ಮೇಲೆ ಪ್ರತಿಭಟನಾಕಾರನೊಬ್ಬ ಶೂ ಎಸೆದಿದ್ದ. ನಂತರ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

Comments 0
Add Comment

  Related Posts

  IPL Team Analysis Kings XI Punjab Team Updates

  video | Tuesday, April 10th, 2018

  IPL Team Analysis Delhi Daredevils Team Updates

  video | Saturday, April 7th, 2018

  IPL First Records

  video | Saturday, April 7th, 2018

  IPL Team Analysis Kings XI Punjab Team Updates

  video | Tuesday, April 10th, 2018
  Suvarna Web Desk