Asianet Suvarna News Asianet Suvarna News

ಕುಂಬ್ಳೆಯ ಕೋಚ್ ಹುದ್ದೆಗೆ ಕಂಟಕವಾದ 5 ಕಾರಣಗಳು

ಅನಿಲ್ ಕುಂಬ್ಳೆ ಹಾಗೂ ವಿರಾಟ್ ಕೊಹ್ಲಿಯ ಜೋಡಿಯನ್ನು ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯಂತ ಯಶಸ್ವೀ ಕೋಚ್- ಕ್ಯಾಪ್ಟನ್ ಜೋಡಿ ಎನ್ನಲಕಾಗುತ್ತಿದೆ. ಆದರೆ ಈಗ ಅನಿಲ್ ಕುಂಬ್ಳೆ ಹಾಗೂ ಬಿಸಿಸಿಐ ನಡುವೆ ಈಗ ಬಿರುಕು ಮೂಡಿದೆ. ಇವರ ನಡುವಿನ ಈ ಬಿರುಕಿನಿಂದಾಗಿ ಕುಂಬ್ಳೆಯನ್ನು ಕೋಚ್ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆಗಳಿವೆ ಎಂಬ ಮಾತುಗಳೂ ಸದ್ಯ ಕೇಳಿ ಬರುತ್ತಿವೆ. ಅಷ್ಟಕ್ಕೂ ಕುಂಬ್ಳೆಯನ್ನು ಕೋಚ್ ಸ್ಥಾನದಿಂದ ಕೆಳಗಿಳಿಸಲು ಕಾರಣವಾಗುವ ಆ ಅಂಶಗಳು ಯಾವುದು? ಇಲ್ಲಿದೆ ವಿವರ

bcci may remove anil kumble as coach of team india due to five reasons
  • Facebook
  • Twitter
  • Whatsapp

ನವದೆಹಲಿ(ಮೇ.26): ಅನಿಲ್ ಕುಂಬ್ಳೆ ಹಾಗೂ ವಿರಾಟ್ ಕೊಹ್ಲಿಯ ಜೋಡಿಯನ್ನು ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯಂತ ಯಶಸ್ವೀ ಕೋಚ್- ಕ್ಯಾಪ್ಟನ್ ಜೋಡಿ ಎನ್ನಲಕಾಗುತ್ತಿದೆ. ಆದರೆ ಈಗ ಅನಿಲ್ ಕುಂಬ್ಳೆ ಹಾಗೂ ಬಿಸಿಸಿಐ ನಡುವೆ ಈಗ ಬಿರುಕು ಮೂಡಿದೆ. ಇವರ ನಡುವಿನ ಈ ಬಿರುಕಿನಿಂದಾಗಿ ಕುಂಬ್ಳೆಯನ್ನು ಕೋಚ್ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆಗಳಿವೆ ಎಂಬ ಮಾತುಗಳೂ ಸದ್ಯ ಕೇಳಿ ಬರುತ್ತಿವೆ. ಅಷ್ಟಕ್ಕೂ ಕುಂಬ್ಳೆಯನ್ನು ಕೋಚ್ ಸ್ಥಾನದಿಂದ ಕೆಳಗಿಳಿಸಲು ಕಾರಣವಾಗುವ ಆ ಅಂಶಗಳು ಯಾವುದು? ಇಲ್ಲಿದೆ ವಿವರ

ಕುಂಬ್ಳೆಗೆ ಕೋಚ್ ಸ್ಥಾನಕ್ಕೆ ಕುತ್ತಾಗುತ್ತಾ ಈ 5 ಕಾರಣಗಳು

ರೀಸನ್ ನಂ 1: ಆಟಗಾರರ ವಾರ್ಷಿಕ ವೇತನವನ್ನು ಶೇ. 150 ಹೆಚ್ಚು ಮಾಡುವ ಕುರಿತಾಗಿ ಪ್ರಸ್ತಾಪಿಸಿದ್ದರು. ಸದ್ಯ ಬಿಸಿಸಿಐನ 'A- ಗ್ರೇಡ್' ಆಟಗಾರರ ವಾರ್ಷಿಕ ವೇತನ 2 ಕೋಟಿ ರೂಪಾಯಿ ಆದರೆ ಇದನ್ನು 5 ಕೋಟಿಗೇರಿಸುವಂತೆ ಕುಂಬ್ಳೆ ಮಾತೆತ್ತಿದ್ದರು.

ರೀಸನ್ ನಂ 2: ವಿರಾಟ್ ಕೊಹ್ಲಿ ಟೀಂ ಇಂಡಿಯಾದ ನಾಯಕ ಹಾಗೂ ಇತರರಿಗಿಂತ ಕೊಹ್ಲಿಯ ಮೇಲೆ ಹೆಚ್ಚಿನ ಒತ್ತಡ ಇದೆ. ಹೀಗಾಗಿ ವಿರಾಟ್ ಕೊಹ್ಲಿಗೆ ಶೇಕಡಾ 25ರಷ್ಟು ಹೆಚ್ಚುವರಿ ಶುಲ್ಕ ನೀಡಬೇಕೆಂದೂ ಕುಂಬ್ಳೆ ಮನವಿ ಮಾಡಿದ್ದರು.

ರೀಸನ್ ನಂ 3: ಇವೆಲ್ಲದರೊಂದಿಗೆ ಕುಂಬ್ಲೇ ಟೀಂ ಇಂಡಿಯಾದ ಆಯ್ಕೆ ಸಮಿತಿಯಲ್ಲಿ ಪ್ರಮುಖ ಸ್ಥಾನ ಪಡೆಯಲಿಚ್ಛಿಸಿದ್ದರು. ಇದೇ ಕಾರಣದಿಂದ ಕೋಚ್ ಹಾಗೂ ನಾಯಕನಿಗೆ ತಂಡದ ಆಟಗಾರರನ್ನು ಆಯ್ಕೆ ಮಾಡುವ ಅಧಿಕಾರ ನೀಡಬೇಕೆಂಬ ಸಲಹೆ ನೀಡಿದ್ದರು ಎಂಬ ಮಾತುಗಳು ಕೇಳಿ ಬಂದಿವೆ. ಈಗಲೂ ಟೀಂ ಇಂಡಿಯಾದ ಆಟಗಾರರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಆಯ್ಕೆ ಸಮಿತಿ ತಂಡದ ಕೋಚ್ ಹಾಗೂ ನಾಯಕನ ಸಲಹೆ ಪಡೆಯುತ್ತಾರೆ. ಆದರೆ ಕೋಚ್ ಹಾಗೂ ನಾಯಕನಿಗೆ ಓಟ್ ಮಾಡುವ ಅವಕಾಶವಿಲ್ಲದಿರುವುದರಿಂದ ಈ ಸಲಹೆಯನ್ನು ಸಮಿತಿ ಪಾಲಿಸಲೇಬೇಕೆಂಬ ನಿಯಮವಿಲ್ಲ.

ರೀಸನ್ ನಂ 4: ಕೋಚ್ ಅನಿಲ್ ಕುಂಬ್ಳೆ ಯಾವುದೇ ಸಲಹೆ ಹಾಗೂ ಪ್ರಸ್ತಾವನೆ ಸಲ್ಲಿಸಲು ಬಿಸಿಸಿಐನ ಸದಸ್ಯರನ್ನು ಸಂಪರ್ಕಿಸದೇ ನೇರವಾಗಿ ಸುಪ್ರೀಂ ಕೋರ್ಟ್'ನಿಂದ ರಚಿಸಲ್ಪಟ್ಟ ಕಮಿಟಿಯ ಬಳಿ ತೆರಳುತ್ತಾಋಎ. ಇವರ ೀ ನಡೆ ಬಿಸಿಸಿಐ ಸದಸ್ಯರಲ್ಲಿ ಅಸಮಾಧಾನ ಉಂಟು ಮಾಡಿದೆ.

ರೀಸನ್ ನಂ 5: ಲೋಧಾ ಸಮಿತಿ ವರದಿಗಾಗಿ ಅನಿಲ್ ಕುಂಬ್ಳೆಯನ್ನು ಭೇಟಿಯಾದಾಗ ಬಿಸಿಸಿಐ ವಿರುದ್ಧ ಅತಿ ಹೆಚ್ಚು ದೂರು ನೀಡಿದ್ದು ಕುಂಬ್ಳೆ ಎಂಬ ಭಾವನೆ ಬಿಸಿಸಿಐನ ಕೆಲ ಸದಸ್ಯರಲ್ಲಿ ಇದೆ. ಅಲ್ಲದೇ ಕುಂಬ್ಳೆಯ ಶಿಫಾರಸ್ಸುಗಳಿಂದಲೇ ಸುಪ್ರೀಂ ಕೋರ್ಟ್ ಬಿಸಿಸಿಐ ವಿರುದ್ಧ ಕಠಿಣ ತೀರ್ಪು ನೀಡಿತ್ತು ಎಂದು ಹೇಳಲಾಗುತ್ತಿದೆ.

Follow Us:
Download App:
  • android
  • ios