ವೆಬ್‌ಸೈಟ್ ತೆರೆದರೆ ಕಾರ್ಯಕಾರಿ ಹಾಗೂ ಆಯ್ಕೆ ಸಮಿತಿ ಸದಸ್ಯರ ಪಟ್ಟಿ ಖಾಲಿ ಎಂದು ತೋರಿಸುತ್ತಿದೆ.

ನವದೆಹಲಿ(ಜ.05): ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಮಿತಿಯ ಶಿಫಾರಸುಗಳನ್ನು ಅಳವಡಿಸಲು ವಿಳಂಬ ಧೋರಣೆ ತಾಳಿದ್ದರ ಫಲವಾಗಿ ಅಧಿಕಾರದಿಂದ ಕೆಳಕ್ಕಿಳಿದ ಅನುರಾಗ್ ಠಾಕೂರ್, ಅಜಯ್ ಶಿರ್ಕೆ ಮತ್ತು ಪದಾಧಿಕಾರಿಗಳ ಹೆಸರುಗಳು ಬಿಸಿಸಿಐನ ಅಧಿಕೃತ ವೆಬ್‌'ಸೈಟ್‌'ನಿಂದ ಕಣ್ಮರೆಯಾಗಿವೆ.

ಬಿಸಿಸಿಐ ಟಿವಿಯಲ್ಲಿ ಅನುರಾಗ್ ಮತ್ತು ಶಿರ್ಕೆ ಅವರ ಹೆಸರನ್ನು ಮಂಗಳವಾರ ತೆಗೆದು ಹಾಕಲಾಗಿತ್ತು. ಆದರೀಗ ವೆಬ್‌'ಸೈಟ್‌'ನಲ್ಲಿ ಪದಾಧಿಕಾರಿಗಳ ಮತ್ತು ಸಮಿತಿ ಸದಸ್ಯರುಗಳ ಹೆಸರುಗಳನ್ನು ನಾಶಮಾಡಲಾಗಿದೆ.

ವೆಬ್‌ಸೈಟ್ ತೆರೆದರೆ ಕಾರ್ಯಕಾರಿ ಹಾಗೂ ಆಯ್ಕೆ ಸಮಿತಿ ಸದಸ್ಯರ ಪಟ್ಟಿ ಖಾಲಿ ಎಂದು ತೋರಿಸುತ್ತಿದೆ.

ಇನ್ನು ಜನವರಿ 15ರಿಂದ ಇಂಗ್ಲೆಂಡ್ ವಿರುದ್ಧ ಮೂರು ಏಕದಿನ ಪಂದ್ಯಗಳು ಹಾಗೂ ಮೂರು ಟಿ-20 ಪಂದ್ಯಗಳು ನಡೆಯಲಿದ್ದು, ಜನವರಿ 6ರಂದು ಟೀಂ ಇಂಡಿಯಾ ತಂಡವನ್ನು ಆಯ್ಕೆ ಮಾಡಲಿದೆ.