Asianet Suvarna News Asianet Suvarna News

ಟೀಂ ಇಂಡಿಯಾ ಕ್ರಿಕೆಟಿಗರ ಪಾಲಿಗೆ ಇನ್ನು ಮನೆ-ಫ್ಯಾಮಿಲಿ ಕನಸಿನ ಮಾತು..!

ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಪ್ರದರ್ಶನ ತೋರಿ ಸದ್ಯ ರಿಲ್ಯಾಕ್ಸ್ ಮೂಡ್’ನಲ್ಲಿರುವ ಟೀಂ ಇಂಡಿಯಾ ಇನ್ನೇನು ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಆದರೆ ಆಸ್ಟ್ರೇಲಿಯಾ ಪ್ರವಾಸದ ನಂತರ ಬಿಡುವಿಲ್ಲದಷ್ಟು ವೇಳಾಪಟ್ಟಿಯನ್ನು ಬಿಸಿಸಿಐ ಸಿದ್ಧಪಡಿಸಿದೆ.

ಹೌದು, ಟೀಂ ಇಂಡಿಯಾ ನವೆಂಬರ್ 21ರಿಂದ ಜನವರಿ 18ರವರೆಗೆ ಆಸ್ಟ್ರೇಲಿಯಾ ವಿರುದ್ಧ 3 ಟಿ20, 4 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳ ಸರಣಿ ಆಡಲಿದೆ. ಇದಾದ ಬಳಿಕ ನ್ಯೂಜಿಲೆಂಡ್ ನೆಲದಲ್ಲಿ ಜನವರಿ 23ರಿಂದ ಫೆಬ್ರವರಿ 10ರವರೆಗೆ 5 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿಯಾಡಲಿದೆ. ನ್ಯೂಜಿಲೆಂಡ್’ನಿಂದ ಸ್ವದೇಶಕ್ಕೆ ಮರುಳುವ ಹೊತ್ತಿಗೆ ಆಸ್ಟ್ರೇಲಿಯಾ ವಿರಾಟ್ ಪಡೆಯನ್ನು ಎದುರಿಸಲು ಭಾರತದಲ್ಲಿ ರೆಡಿಯಾಗಿರತ್ತೆ. ಫೆಬ್ರವರಿ 24ರಿಂದ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 5 ಏಕದಿನ ಪಂದ್ಯ ಹಾಗೂ 2 ಟಿ20 ಪಂದ್ಯವನ್ನಾಡಲಿದೆ. ಈ ಸರಣಿ ಮಾರ್ಚ್ 13ಕ್ಕೆ ಮುಕ್ತಾಯವಾಗಲಿದೆ. ಆಬಳಿಕ ಐಪಿಎಲ್ ಹಂಗಾಮಾ. ಇದಾದ ಬಳಿಕ ಇಂಗ್ಲೆಂಡ್’ನಲ್ಲಿ ಏಕದಿನ ವಿಶ್ವಕಪ್.. 

Video Top Stories