ಬಿಸಿಸಿಐ ಸಮಿತಿಯ ಮುಖ್ಯಸ್ಥರಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ ಸಭೆಯ ನಡೆಯಲಿದೆ.
ನವದೆಹಲಿ(ಸೆ.13): ಬಿಸಿಸಿಐನ ಹಣಕಾಸು ಸಮಿತಿ ಸಭೆ ಗುರುವಾರ ದೆಹಲಿಯಲ್ಲಿ ನಡೆಯಲಿದು, ಆಟಗಾರ್ತಿಯರ ವೇತನ ಹೆಚ್ಚಳ ಕುರಿತು ಪ್ರಮುಖವಾಗಿ ಚರ್ಚೆ ನಡೆಯಲಿದೆ.
ಮಹಿಳಾ ಹಾಗೂ ಪುರುಷ ಆಟಗಾರರ ಗುತ್ತಿಗೆ ಮೊತ್ತ ಏರಿಕೆ, ಬಿಸಿಸಿಐ ಅಡಿಯಲ್ಲಿ ನಡೆಯುವ ಸ್ಥಳೀಯ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಆಟಗಾರರ ವೇತನ ಹೆಚ್ಚಳ ಮಾಡುವುದು ಸೇರಿದಂತೆ ಪ್ರಮುಖ 7 ವಿಷಯಗಳು ಸಭೆಯ ಪ್ರಮುಖ ಕಾರ್ಯಸೂಚಿ ಯಾಗಳಾಗಿವೆ.
ಬಿಸಿಸಿಐ ಸಮಿತಿಯ ಮುಖ್ಯಸ್ಥರಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ ಸಭೆಯ ನಡೆಯಲಿದೆ.