Asianet Suvarna News Asianet Suvarna News

ಶ್ರೀಶಾಂತ್ ಆಸೆಗೆ ಮತ್ತೆ ತಣ್ಣೀರೆರಚಿದ ಬಿಸಿಸಿಐ...!

2013ರ ಐಪಿಎಲ್ ವೇಳೆ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಶ್ರೀಶಾಂತ್ ಸೇರಿದಂತೆ ಮತ್ತಿಬ್ಬರು ಆಟಗಾರರಾದ ಅಜಿತ್ ಚಾಂಡೀಲಾ ಹಾಗೂ ಅಂಕಿತ್ ಚೌಹಾಣ್ ಅವರ ಮೇಲೆ ಬಿಸಿಸಿಐ ಅಜೀವ ನಿಷೇಧ ಹೇರಿದೆ.

BCCI files appeal against Kerala High Court decision of lifting S Sreesanth lifetime ban

ನವದೆಹಲಿ(ಸೆ.19): ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಸಂಬಂಧ ಶ್ರೀಶಾಂತ್ ವಿರುದ್ಧ ಹೇರಿದ್ದ ಆಜೀವ ನಿಷೇಧವನ್ನು ತೆರವುಗೊಳಿಸಿ ಕೇರಳ ಹೈಕೋರ್ಟ್ ನೀಡಿದ್ದ ತೀರ್ಪನ್ನು ಬಿಸಿಸಿಐ ಪ್ರಶ್ನಿಸಿ ಅರ್ಜಿ ಸಲ್ಲಿಸಿದೆ. ಈ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್'ಗೆ ಮರಳಬೇಕೆನ್ನುವ ಕೇರಳ ವೇಗಿಯ ಕನಸಿಗೆ ಬಿಸಿಸಿಐ ತಣ್ಣೀರೆರಚಿದೆ.

2013ರ ಐಪಿಎಲ್‌'ನಲ್ಲಿ ರಾಜಸ್ಥಾನ ರಾಯಲ್ಸ್‌'ನ ಶ್ರೀಶಾಂತ್ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದರು ಎನ್ನುವ ಆರೋಪದ ಮೇಲೆ ಬಿಸಿಸಿಐ ಅವರ ವಿರುದ್ಧ ಆಜೀವ ನಿಷೇಧ ಹೇರಿತ್ತು. ಇತ್ತೀಚೆಗಷ್ಟೇ ಕೇರಳ ಹೈಕೋರ್ಟ್ ಶ್ರೀಶಾಂತ್ ಪರವಾಗಿ ತೀರ್ಪು ನೀಡಿತ್ತು.

2013ರ ಐಪಿಎಲ್ ವೇಳೆ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಶ್ರೀಶಾಂತ್ ಸೇರಿದಂತೆ ಮತ್ತಿಬ್ಬರು ಆಟಗಾರರಾದ ಅಜಿತ್ ಚಾಂಡೀಲಾ ಹಾಗೂ ಅಂಕಿತ್ ಚೌಹಾಣ್ ಅವರ ಮೇಲೆ ಬಿಸಿಸಿಐ ಅಜೀವ ನಿಷೇಧ ಹೇರಿದೆ.

Latest Videos
Follow Us:
Download App:
  • android
  • ios