ಕೋಚ್ ನೇಮಕವನ್ನು ಅಂತಿಮಗೊಳಿಸುತ್ತದೆ. ಇದಕ್ಕಾಗಿ ನಾನೂ ಕೂಡ ನಿರೀಕ್ಷಿಸುತ್ತಿದ್ದೇನೆ' ಎಂದು ತಿಳಿಸಿದ್ದಾರೆ. ಆಯ್ಕೆ ಪ್ರಕ್ರಿಯೆ ಇನ್ನು ನಡೆಯುತ್ತಿದೆ. ಬಿಸಿಸಿಐ ನೀಮಿತ ಮೂವರು ಸದಸ್ಯರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ
ಮುಂಬೈ(ಜು.11): ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್' ಆಗಿ ರವಿಶಾಸ್ತ್ರಿ ಅವರನ್ನು ನಾವು ನೇಮಕ ಮಾಡಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌದರಿ ತಿಳಿಸಿದ್ದಾರೆ.
ಆಯ್ಕೆ ಪ್ರಕ್ರಿಯೆ ಇನ್ನು ನಡೆಯುತ್ತಿದೆ. ಬಿಸಿಸಿಐ ನೀಮಿತ ಮೂವರು ಸದಸ್ಯರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ ಕೋಚ್ ನೇಮಕವನ್ನು ಅಂತಿಮಗೊಳಿಸುತ್ತದೆ. ಇದಕ್ಕಾಗಿ ನಾನೂ ಕೂಡ ನಿರೀಕ್ಷಿಸುತ್ತಿದ್ದೇನೆ' ಎಂದು ತಿಳಿಸಿದ್ದಾರೆ.
ನಿನ್ನೆಯಷ್ಟೆ ಸಲಹಾ ಸಮಿತಿ ಸದಸ್ಯರಾದ ಸೌರವ್ ಗಂಗೂಲಿ ಕೋಚ್ ಆಯ್ಕೆ ಪ್ರಕ್ರಿಯೆ ಇನ್ನು ತಡವಾಗಲಿದೆ ಎಂದು ಹೇಳಿದ್ದರು. ಈಗಾಗಲೆ ರವಿಶಾಸ್ತ್ರಿ ಕೋಚ್ ಆಗಿ ನೇಮಕವಾಗಿದ್ದಾರೆಂದು ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾದ ಹಿನ್ನಲೆಯಲ್ಲಿ ಚೌಧರಿ ಸ್ಪಷ್ಟನೆ ನೀಡಿದ್ದಾರೆ.
ಸಲಹಾ ಸಮಿತಿ ಶಾಸ್ತ್ರಿ ವೀರೇಂದ್ರ ಸೇಹ್ವಾಗ್, ಟಾಮ್ ಮೋಡಿ ಸೇರಿದಂತೆ 6 ಮಂದಿಯನ್ನು ಈಗಾಗಲೇ ಸಂದರ್ಶನ ಮಾಡಿದೆ. ಅಂತಿಮ ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ.
