ಎಂ.ಎಸ್​​​ ಧೋನಿ ಇನ್ನೂ ಟೀಂ ಇಂಡಿಯಾ ನಾಯಕ. ಯಾಕೆ ಶಾಕ್​​​ ಆಯ್ತಾ..? ಆಗ್ಲೇಬೇಕು..! ಯಾಕಂದ್ರೆ ಧೋನಿ ಟೀಂ ಇಂಡಿಯಾವನ್ನ ಮುನ್ನಡೆಸುವುದನ್ನ ನೀವು ಇನ್ನೂ ನೋಡಬಹುದು. ಮಹಿ ತಮ್ಮ ನಾಯಕತ್ವವನ್ನು ವಾಪಸ್​​​ ಪಡೆದ್ದಾ ಅಂತ ಯೋಚನೇ ಮಾಡುತ್ತಿದ್ದೀರಾ..? ಈ ಸ್ಟೋರಿ ಓದಿ ಗೊತ್ತಾಗುತ್ತೆ.

ಎಂ.ಎಸ್​​​ ಧೋನಿ ಇನ್ನೂ ಟೀಂ ಇಂಡಿಯಾ ನಾಯಕ. ಯಾಕೆ ಶಾಕ್​​​ ಆಯ್ತಾ..? ಆಗ್ಲೇಬೇಕು..! ಯಾಕಂದ್ರೆ ಧೋನಿ ಟೀಂ ಇಂಡಿಯಾವನ್ನ ಮುನ್ನಡೆಸುವುದನ್ನ ನೀವು ಇನ್ನೂ ನೋಡಬಹುದು. ಮಹಿ ತಮ್ಮ ನಾಯಕತ್ವವನ್ನು ವಾಪಸ್​​​ ಪಡೆದ್ದಾ ಅಂತ ಯೋಚನೇ ಮಾಡುತ್ತಿದ್ದೀರಾ..? ಈ ಸ್ಟೋರಿ ಓದಿ ಗೊತ್ತಾಗುತ್ತೆ.

ಯುವ ಆಟಗಾರರಿಗೆ ಧೋನಿಯೇ ಸಾರಥಿ..!

ಧೋನಿ ಇಂಗ್ಲೆಂಡ್​​​ ವಿರುದ್ಧ ಭಾರತದ ತಂಡವನ್ನ ಮುನ್ನಡೆಸಲಿದ್ದಾರೆ. ಧೋನಿಯ ಮಾಸ್ಟರ್​​​ ಮೈಂಡ್​​​ ಮತ್ತೆ ವರ್ಕ್​ ಮಾಡುವುದನ್ನು ನೀವು ಕಣ್ತುಂಬಿಕೊಳ್ಳಬಹುದು. ತುಂಬ ತಲೆ ಕೆಡಸಿಕೊಳ್ಳಬೇಡಿ. ಧೋನಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿಲ್ಲ. ಬದಲಾಗಿ ಇಂಡಿಯಾ A ಟೀಮ್​​​​ ಅನ್ನು ಮುನ್ನಡೆಸುತ್ತಿರೋದು. ಇಂಗ್ಲೆಂಡ್​​​ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಧೋನಿ A ತಂಡವನ್ನ ಮನ್ನಡೆಸಲಿದ್ದಾರೆ. ಇದನ್ನ ಸ್ವತಃ ಆಯ್ಕೆ ಸಮಿತಿಯ ಅಧ್ಯಕ್ಷ ಎಮ್​​.ಎಸ್​​​.ಕೆ. ಪ್ರಸಾದ್​​​ ಹೇಳಿದ್ದಾರೆ ನೋಡಿ.

ಸದ್ಯ ಟೀಂ ಇಂಡಿಯಾದ ನಾಯಕನ ಕೀರಿಟವನ್ನು ಕೆಳಗಿಟ್ಟರುವ ಧೋನಿ, ಇನ್ನೂ ಸ್ವಲ್ಪ ದಿನ ನಾಯಕನ ಕ್ಯಾಪನ್ನ ಧರಿಸುವ ಅವಕಾಶ ಸಿಕ್ಕಿದೆ. ಆಶೀಶ್​​​ ನೆಹ್ರಾ, ಯುವರಾಜ್​​ ಸಿಂಗ್​​​, ಶಿಖರ್​​​​ ಧವನ್​​​ರಂತಹ ಹಿರಿಯ ಆಟಗಾರರನ್ನ ಧೋನಿ ಇಂಗ್ಲೆಂಡ್​​​ ವಿರುದ್ಧ ನಡೆಯಲಿರುವ ಮೊದಲ ಅಭ್ಯಾಸ ಪಂದ್ಯದಲ್ಲಿ ಮನ್ನಡೆಸಲಿದ್ದಾರೆ.

ಬಿಸಿಸಿಐ ಕಟು ನಿರ್ಧಾರಕ್ಕೆ ತಲೆಬಾಗಿದ ಧೋನಿ: ಹಿರಿಯ ಆಟಗಾರಿಗೆ ಅಭ್ಯಾಸ ಪಂದ್ಯವೇ ಅಗ್ನಿ ಪರೀಕ್ಷೆ

ಅಷ್ಟಕ್ಕೂ ದಶಕಗಳ ಕಾಲ ದೊರೆಯಂತೆ ಮೆರದಿದ್ದ ಧೋನಿ ಅಭ್ಯಾಸ ಪಂದ್ಯವನ್ನಾಡುವ ಅವಶ್ಯಕತೆ ಬಿದ್ದಿರುವುದು ಬಿಸಿಸಿಐ ತೆಗೆದುಕೊಂಡಿರುವ ಕಠಿಣ ನಿರ್ಧಾರದಿಂದ. ಯಾವುದೇ ಆಟಗಾರ ಹೆಚ್ಚು ಕಾಲ ತಂಡದಿಂದ ದೂರ ಉಳಿದರೆ ಅಥವಾ ಗಾಯಾಳುವಾಗಿ ಹೊರಬಿದ್ದರೆ ಆ ಆಟಗಾರ ಒಂದು ಪ್ರಥಮ ದರ್ಜೆ ಪಂದ್ಯವನ್ನಾಡಲೇಬೇಕು ಎಂಬ ನಿರ್ಧಾರ ಮಾಡಿದೆ. ಹೀಗಾಗಿ ಧೋನಿ ಅಭ್ಯಾಸ ಪಂದ್ಯವಾಡಲೇಬೇಕಾದ ಪರಿಸ್ಥಿತಿ ಬಂದಿದೆ.

ಒಟ್ಟಿನಲ್ಲಿ ಧೋನಿ ನಾಯಕತ್ವವನ್ನು ತ್ಯಜಿಸಿದ ಮೇಲೆ ಬೇಸರಗೊಂಡಿದ್ದ ಅವರ ಅಭಿಮಾನಿಗಳಿಗೆ ಮತ್ತೊಮ್ಮೆ ಧೋನಿಯ ಕ್ಯಾಪ್ಟೆನ್ಸಿಯನ್ನ ಕಣ್ತುಂಬಿಕೊಳ್ಳಬಹುದು. ಆದ್ರೆ ಪ್ರಿಯ ವೀಕ್ಷಕರೇ ಒಂದು ವಿಷಯ ನೆನಪಿರಲಿ ನಿಮಗೆ ಧೋನಿ ನಾಯಕತ್ವವನ್ನ ನೋಡೋದಕ್ಕೆ ಇದು ಲಾಸ್ಟ್​​ ಚಾನ್ಸ್​​​​​.