Asianet Suvarna News Asianet Suvarna News

ಆಫ್ರಿಕಾ ಪ್ರವಾಸಕ್ಕೆ ಇಂಡಿಯಾ ಎ ತಂಡ ಪ್ರಕಟ

ಗಾಯದ ಸಮಸ್ಯೆಯಿಂದ ಐಪಿಎಲ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹೊರಗುಳಿದಿದ್ದ ಮನೀಶ್ ಪಾಂಡೆ ಇದೀಗ ಗುಣಮುಖರಾಗಿದ್ದು ಭಾರತ ಎ ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ.

BCCI announces India A squad for tour of South Africa

ಮುಂಬೈ(ಜೂ.29): ಮುಂದಿನ ತಿಂಗಳು ಆರಂಭವಾಗಲಿರುವ ಏಕದಿನ ತ್ರಿಕೋನ ಸರಣಿ ಹಾಗೂ ನಾಲ್ಕುದಿನಗಳ ಎರಡು ಪಂದ್ಯಕ್ಕೆ ಭಾರತ ಎ ತಂಡವನ್ನು ಪ್ರಕಟಿಸಿದ್ದು, ಏಕದಿನ ತಂಡವನ್ನು ಮನೀಶ್ ಪಾಂಡೆ ಮುನ್ನಡೆಸಿದರೆ, ನಾಲ್ಕುದಿನಗಳ ಪಂದ್ಯಕ್ಕೆ ತಂಡವನ್ನು ಕರುಣ್ ನಾಯರ್ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ.

ಜುಲೈ ತಿಂಗಳಿನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ, ಭಾರತ ಸೇರಿದಂತೆ ಆಸ್ಟ್ರೇಲಿಯಾ ತಂಡವು ತ್ರಿಕೋನ ಸರಣಿಯಲ್ಲಿ ಭಾಗವಹಿಸಲಿದೆ.

ಗಾಯದ ಸಮಸ್ಯೆಯಿಂದ ಐಪಿಎಲ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹೊರಗುಳಿದಿದ್ದ ಮನೀಶ್ ಪಾಂಡೆ ಇದೀಗ ಗುಣಮುಖರಾಗಿದ್ದು ಭಾರತ ಎ ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ. ಸಾಕಷ್ಟು ಯುವ ಆಟಗಾರರಿಂದ ಕೂಡಿದ ಈ ತಂಡದಲ್ಲಿ ಕೃನಾಲ್ ಪಾಂಡ್ಯ ಭಾರತ ಎ ತಂಡಕ್ಕೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.

ಇನ್ನು ಐಪಿಎಲ್'ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾದ ಕನ್ನಡಿಗ ಕರುಣ್ ನಾಯರ್ ನಾಲ್ಕುದಿನಗಳ ಪಂದ್ಯದ ತಂಡವನ್ನು ಮುನ್ನಡೆಸಲಿದ್ದಾರೆ. ಈ ಸರಣಿಯಲ್ಲಿ ಫಾರ್ಮ್'ಗೆ ಮರಳಲು ಕರುಣ್ ನಾಯರ್ ಕಾತರರಾಗಿದ್ದಾರೆ. ಇನ್ನೂ 10ನೇ ಆವೃತ್ತಿಯ ಐಪಿಎಲ್'ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ ಮೊಹಮ್ಮದ್ ಸಿರಾಜ್ ಹಾಗೂ ಅಂಕಿತ್ ಚೌಧರಿ ಮೇಲೆ ಸಾಕಷ್ಟು ನಿರೀಕ್ಷೆಯಿದೆ.

ಏಕದಿನ ಸರಣಿಗೆ ಎ ತಂಡ:

ಮನೀಶ್ ಪಾಂಡೆ(ನಾಯಕ), ರಿಶಭ್ ಪಂತ್(ವಿಕೆಟ್ ಕೀಪರ್), ಮನ್ದೀಪ್ ಸಿಂಗ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ದೀಪಕ್ ಹೂಡಾ, ಕರುಣ್ ನಾಯರ್, ಕೃನಾಲ್ ಪಾಂಡ್ಯ, ವಿಜಯ್ ಶಂಕರ್, ಅಕ್ಷರ್ ಪಟೇಲ್, ಯಜುವೇಂದ್ರ ಚಾಹಲ್, ಜಯಂತ್ ಯಾದವ್, ಬಾಸಿಲ್ ಥಂಪಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಸಿದ್ದಾರ್ಥ್ ಕೌಲ್.

ನಾಲ್ಕುದಿನಗಳ ಪಂದ್ಯಕ್ಕೆ:

ಕರುಣ್ ನಾಯರ್(ನಾಯಕ), ಇಶಾನ್ ಕಿಶನ್(ವಿಕೆಟ್ ಕೀಪರ್), ಪಿಕೆ ಪಾಂಚಾಲ್, ಅಭಿನವ್ ಮುಕುಂದ್, ಶ್ರೇಯಸ್ ಅಯ್ಯರ್, ಅಂಕಿತ್ ಭಾವ್ನೆ, ಸುದೀಪ್ ಚಟರ್ಜಿ, ಹನುಮಾನ್ ವಿಹಾರಿ, ಜಯಂತ್ ಯಾದವ್, ಶಹಬಾಜ್ ನದೀಮ್, ನವ್'ದೀಪ್ ಶೈನಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಅಂಕಿತ್ ಚೌಧರಿ, ಅಂಕಿತ್ ರಜಪೂತ್.  

Follow Us:
Download App:
  • android
  • ios