Asianet Suvarna News Asianet Suvarna News

ಮೊಹಮ್ಮದ್ ಶಮಿಗೆ 15 ಓವರ್ ಬೌಲಿಂಗ್ ಮಾಡಲು ಮಾತ್ರ ಅವಕಾಶ!

ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ಹೊಸ ನಿರ್ಬಂಧ ವಿಧಿಸಿದೆ. ಇನ್ನಿಂಗ್ಸ್‌ನಲ್ಲಿ ಕೇವಲ 15 ಓವರ್ ಬೌಲಿಂಗ್ ಮಾಡಲು ಮಾತ್ರ ಅವಕಾಶ ಮಾಡಿಕೊಟ್ಟಿದೆ. ಅಷ್ಟಕ್ಕೂ ಬಿಸಿಸಿಐ ವಿನೂತನ ಕಂಡೀಷನ್ ಹಾಕಿದ್ದೇಕೆ? ಇಲ್ಲಿದೆ ವಿವರ.

BCCI allows Mohammed Shami 15-over cap for Ranji Trophy
Author
Bengaluru, First Published Nov 17, 2018, 5:56 PM IST

ಕೋಲ್ಕತ್ತಾ(ನ.17): ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ರಮುಖ ವೇಗಿ ಮೊಹಮ್ಮದ್ ಶಮಿಗೆ ಬಿಸಿಸಿಐ ಹೊಸ ನಿರ್ಬಂಧ ವಿಧಿಸಿದೆ. ಪ್ರತಿ ಇನ್ನಿಂಗ್ಸ್‌ನಲ್ಲಿ ಕೇವಲ 15 ಓವರ್ ಬೌಲಿಂಗ್ ಮಾಡಲು ಮಾತ್ರ ಶಮಿಗೆ ಅವಕಾಶ ನೀಡಿದೆ.

ಮೊಹಮ್ಮದ್ ಶಮಿಗೆ ಈ ರೀತಿ ವಿನೂತನ ನಿರ್ಬಂಧ ವಿಧಿಸಿರೋದು ಆಸಿಸ್ ಪ್ರವಾಸದಲ್ಲಲ್ಲ. ಬದಲಾಗಿ ರಣಜಿ ಟೂರ್ನಿಯಲ್ಲಿ. ನವೆಂಬರ್ 20 ರಿಂದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆರಂಭವಾಗಲಿರುವ ಕೇರಳಾ ವಿರುದ್ದದ ರಣಜಿ ಪಂದ್ಯದಲ್ಲಿ ಆಡಲು ಮೊಹಮ್ಮದ್ ಶಮಿಗೆ ಅವಕಾಶ ನೀಡಿದೆ.

ಶಮಿಗೆ ಆವಕಾಶ ಮಾಡಿಕೊಟ್ಟಿರುವ ಬಿಸಿಸಿಐ ಕಂಡೀಷನ್ ಹಾಕಿದೆ. ಪ್ರತಿ ಇನ್ನಿಂಗ್ಸ್‌ನಲ್ಲಿ ಕೇವಲ 15 ಓವರ್ ಮಾತ್ರ ಬೌಲಿಂಗ್ ಮಾಡಲು ಸೂಚಿಸಿದೆ. ಹೆಚ್ಚುವರಿಯಾಗಿ 2 ರಿಂದ 3 ಓವರ್ ಹಾಕಬಹುದು ಎಂದು ಬಿಸಿಸಿಐ ಹೇಳಿದೆ. ಬಿಸಿಸಿಐ ಈ ನೂತನ ನಿರ್ಬಂಧಕ್ಕೆ ಕಾರಣ ಆಸ್ಟ್ರೇಲಿಯಾ ಪ್ರವಾಸ.

ಕೇರಳ ವಿರುದ್ಧದ ರಣಜಿ ಪಂದ್ಯದ  ಬಳಿಕ ಮೊಹಮ್ಮದ್ ಶಮಿ ಆಸಿಸ್ ಪ್ರವಾಸ ಕೈಗೊಳ್ಳಲಿದೆ. ಹೀಗಾಗಿ ಗಾಯದ ಸಮಸ್ಯೆ, ಫಿಟ್ನೆಸ್ ಸೇರಿದಂತೆ ಇತರ  ಸಮಸ್ಯೆಗಳು ತಲೆದೋರದಂತೆ ಬಿಸಿಸಿಐ ಮುನ್ನಚ್ಚೆರಿಕೆ ಕ್ರಮವಾಗಿ ನಿರ್ಬಂಧ ಹೇರಿದೆ.

Follow Us:
Download App:
  • android
  • ios