ಒಂದು ರಾಜ್ಯ ಒಂದು ಮತ, ಪದಾಧಿಕಾರಿಗಳ ವಯಸ್ಸಿನ ಮಿತಿ, ಕೂಲಿಂಗ್ ಆಫ್ ಅವಧಿ ಸೇರಿದಂತೆ ಐದು ವಿವಾದಿತ ಶಿಫಾರಸುಗಳನ್ನು ಹೊರತು ಪಡಿಸಿ ಉಳಿದ ಶಿಫಾರಸುಗಳನ್ನು ಜಾರಿಗೊಳಿಸಲು ಬಿಸಿಸಿಐನ ಪದಾಧಿಕಾರಿಗಳು ಸಮ್ಮತಿ ಸೂಚಿಸಿದ್ದಾರೆ.

ನವದೆಹಲಿ(ಜು.26): ವಿವಾದಿತ 5 ಅಂಶಗಳನ್ನು ಹೊರತು ಪಡಿಸಿ ನ್ಯಾಯಮೂರ್ತಿ ಲೋಧಾ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಬಿಸಿಸಿಐ ಮುಂದಾಗಿದೆ.

ಇಂದು ನಡೆದ ಬಿಸಿಸಿಐನ ವಿಶೇಷ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಸಭೆಯ ಬಳಿಕ ಬಿಸಿಸಿಐನ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಈ ವಿಷಯವನ್ನು ತಿಳಿಸಿದರು.

ಒಂದು ರಾಜ್ಯ ಒಂದು ಮತ, ಪದಾಧಿಕಾರಿಗಳ ವಯಸ್ಸಿನ ಮಿತಿ, ಕೂಲಿಂಗ್ ಆಫ್ ಅವಧಿ ಸೇರಿದಂತೆ ಐದು ವಿವಾದಿತ ಶಿಫಾರಸುಗಳನ್ನು ಹೊರತು ಪಡಿಸಿ ಉಳಿದ ಶಿಫಾರಸುಗಳನ್ನು ಜಾರಿಗೊಳಿಸಲು ಬಿಸಿಸಿಐನ ಪದಾಧಿಕಾರಿಗಳು ಸಮ್ಮತಿ ಸೂಚಿಸಿದ್ದಾರೆ.

ಇನ್ನು ರಾಜ್ಯ ಕ್ರಿಕೆಟ್ ಸಂಸ್ಥೆ ಪದಾಧಿಕಾರಿಗಳನ್ನು ಹೊರತು ಪಡಿಸಿ, ಯಾರು ಸಹ ಬಿಸಿಸಿಐನ ವಿಶೇಷ ಸಭೆಯಲ್ಲಿ ಪಾಲ್ಗೊಳ್ಳಬಾರದೆಂದು ಸುಪ್ರೀಂಕೋರ್ಟ್ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಸಿಇಓ ರಾಹುಲ್ ಜೋಹ್ರಿಯನ್ನು ಸಭಾಂಗಣದಿಂದ ಹೊರಗೆ ಕಳಿಸಲಾಯಿತು.