ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಸಹ ಆಟಗಾರ ತಮೀಮ್ ಇಕ್ಬಾಲ್ ತಿಳಿಸಿದ್ದಾರೆಂದು ವರದಿಯಾಗಿದೆ.

ವೆಲ್ಲಿಂಗ್ಟನ್(ಜ.16): ಬಾಂಗ್ಲಾದೇಶ ನಾಯಕ ಮುಷ್ಫಿಕರ್ ರಹೀಮ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿದ್ದ ಮೊದಲ ಟೆಸ್ಟ್ ಪಂದ್ಯದ ಕೊನೆಯ ದಿನದಾಟದಂದು ಕಿವೀಸ್ ವೇಗಿ ಟೀಮ್ ಸೌಥಿ ಎಸೆದ ಬೌನ್ಸರ್ ರಹೀಮ್ ತಲೆಗೆ ಬಡಿದಿದೆ. ವೇಗದ ರಬಸಕ್ಕೆ ರಹೀಮ್ ಅಲ್ಲೇ ನೆಲಕ್ಕುರುಳಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಸಹ ಆಟಗಾರ ತಮೀಮ್ ಇಕ್ಬಾಲ್ ತಿಳಿಸಿದ್ದಾರೆಂದು ವರದಿಯಾಗಿದೆ.

ಮೊದಲ ಇನಿಂಗ್ಸ್ನಲ್ಲಿ 159 ರನ್ ಸಿಡಿಸಿದ್ದ ರಹೀಮ್, ಎರಡನೇ ಇನಿಂಗ್ಸ್'ನಲ್ಲಿ 13 ರನ್ ಗಳಿಸಿದ್ದಾಗ ಈ ಅವಘಡ ಸಂಭವಿಸಿದೆ.

ಹೀಗಿತ್ತು ಆ ಕ್ಷಣ...