ಬಾಂಗ್ಲಾದೇಶ ಕ್ರಿಕೆಟ್ ತಂಡ 2019ರ ವಿಶ್ವಕಪ್ ಟೂರ್ನಿಗೆ ಸಿದ್ಧತೆ ಆರಂಭಿಸಿದೆ. ಹೀಗಾಗಿ ತಂಡದ ಸ್ಪಿನ್ ಕೋಚ್ ಅವಧಿಯನ್ನ ವಿಸ್ತರಿಸಲಾಗಿದೆ. ಇದೀಗ 2019ರ ವರೆಗೆ ಬಾಂಗ್ಲಾ ತಂಡದ ಸ್ಪಿನ ಕೋಚ್ ಜವಾಬ್ದಾರಿ ಕನ್ನಡಿಗನ ಹೆಗಲ ಮೇಲಿದೆ.

ಢಾಕ(ನ.25): ಬಾಂಗ್ಲಾದೇಶ ಕ್ರಿಕೆಟ್ ತಂಡದ ಸ್ಪಿನ್ ಮೇಲ್ವಿಚಾರಕನಾಗಿ ಕನ್ನಡಿಗ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಅವರ ಅವಧಿಯನ್ನ ವಿಸ್ತರಿಸಲಾಗಿದೆ. ನೂತನ ಒಪ್ಪಂದದ ಪ್ರಕಾರ 2019ರ ವಿಶ್ವಕಪ್ ಟೂರ್ನಿ ವರೆಗೂ ಸುನಿಲ್ ಜೋಶಿ, ಬಾಂಗ್ಲಾದೇಶ ತಂಡದ ಸ್ಪಿನ್ ಮೆಲ್ವಿಚಾರಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅವಧಿ ವಿಸ್ತರಿಸಿದ ಬಾಂಗ್ಲಾ ಕ್ರಿಕೆಟ್ ಮಂಡಳಿಗೆ ಧನ್ಯವಾದ ಹೇಳಿದ ಸುನಿಲ್ ಜೋಶಿ, 2015ರ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ಸೆಮಿಫೈನಲ್ ಪ್ರವೇಶಿಸಿತ್ತು. 2019ರಲ್ಲಿ ಮತ್ತಷ್ಟು ಉತ್ತಮ ಪ್ರದರ್ಶನ ನೀಡಲಿದೆ ಎಂದಿದ್ದಾರೆ. 

ಬಾಂಗ್ಲಾದೇಶ ತಂಡ ಉತ್ತಮ ಹೋರಾಟ ನೀಡುತ್ತಿದೆ. ಮಂದಿನ ವಿಶ್ವಕಪ್ ಟೂರ್ನಿಗಾಗಿ ಬಾಂಗ್ಲಾದೇಶ ಈಗಾಗಲೇ ಸಿದ್ದತೆ ಆರಂಭಿಸಿದೆ. ಬಾಂಗ್ಲಾ ಸ್ಪಿನ್ನರ್‌ಗಳು ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂದು ಜೋಶಿ ಹೇಳಿದ್ದಾರೆ.