ಗೆಲ್ಲಲು 89 ರನ್ ಗುರಿ ಪಡೆದ ಆಕ್ಸಿಯಾಮ್ ತಂಡದ ವಿರುದ್ಧ ಲಾಲ್ಮಾಟಿಯಾದ ಬೌಲರ್ ಸುಜನ್ ಮೊದಲ ಓವರ್ ಎಸೆಯುತ್ತಾರೆ. 65 ವೈಡ್'ಗಳು ಹಾಗೂ 15 ನೋಬಾಲ್'ಗಳನ್ನು ಹಾಕುತ್ತಾರೆ. ವೈಡ್ ಮತ್ತು ನೋಬಾಲ್ ಅಲ್ಲದ ನಾಲ್ಕು ಬಾಲ್'ನಲ್ಲಿ 12 ರನ್ ಹರಿದುಬರುತ್ತದೆ.
ಢಾಕಾ, ಬಾಂಗ್ಲಾದೇಶ: ಬಾಂಗ್ಲಾದೇಶದ ಬೌಲರ್'ವೊಬ್ಬ ಯಾರಿಗೂ ಬೇಡವಾದ ಹೊಸ ವಿಶ್ವದಾಖಲೆಗೆ ಕಾರಣನಾಗಿದ್ದಾನೆ. ಸುಜನ್ ಎಂಬ ಬೌಲರ್ ಕೇವಲ 4 ಬಾಲ್'ನಲ್ಲಿ 92 ರನ್ನಿತ್ತಿದ್ದಾನೆ. ಆಕ್ಸಿಯಾಮ್ ಮತ್ತು ಲಾಲ್ಮಾಟಿಯಾ ಎಂಬ ತಂಡಗಳ ನಡುವೆ ನಡೆದ ಸೆಕೆಂಡ್ ಡಿವಿಷನ್ ಲೀಗ್ ಪಂದ್ಯದ ವೇಳೆ ಇಂಥದ್ದೊಂದು ದಾಖಲೆ ಬಂದಿದೆ. ಹಲವು ದಶಕಗಳ ಹಿಂದೆ ನ್ಯೂಜಿಲೆಂಡ್ ಬೌಲರ್ ಬೆರ್ಟ್ ವಾನ್ಸ್ ಅವರು ಒಂದು ಓವರ್'ನಲ್ಲಿ 77 ರನ್ ಚಚ್ಚಿಸಿಕೊಂಡಿದ್ದು ಈವೆಗಿನ ದಾಖಲೆಯಾಗಿತ್ತು. ನ್ಯೂಜಿಲಂಡ್'ನ ಫಸ್ಟ್ ಕ್ಲಾಸ್ ಪಂದ್ಯದ ವೇಳೆ 22 ಎಸೆತಗಳನ್ನು ಒಂದು ಓವರೆಂದು ಪರಿಗಣಿಸಲಾಗುತ್ತಿತ್ತು. ಅಂದರೆ, ವ್ಯಾನ್ಸ್ ಅವರು 22 ಬಾಲ್'ನಲ್ಲಿ 77 ರನ್ ಹೊಡೆಸಿಕೊಂಡಿದ್ದರು. ಆದರೆ, ಬಾಂಗ್ಲಾ ಬೌಲರ್ ಸುಜೋನ್ ಕೇವಲ 4 ಬಾಲ್'ನಲ್ಲಿ 92 ರನ್ ಚಚ್ಚಿಸಿಕೊಂಡಿದ್ದು ವಿಚತ್ರದಲ್ಲಿ ವಿಚಿತ್ರ..!
ಇದು ಹೇಗೆ ಸಾಧ್ಯವಾಯ್ತು?
ಗೆಲ್ಲಲು 89 ರನ್ ಗುರಿ ಪಡೆದ ಆಕ್ಸಿಯಾಮ್ ತಂಡದ ವಿರುದ್ಧ ಲಾಲ್ಮಾಟಿಯಾದ ಬೌಲರ್ ಸುಜನ್ ಮೊದಲ ಓವರ್ ಎಸೆಯುತ್ತಾರೆ. 15 ನೋಬಾಲ್ ಹಾಗೂ 13 ವೈಡ್'ಗಳನ್ನು ಹಾಕುತ್ತಾರೆ. ಅವರ 13 ವೈಡ್'ಗಳು ಬೈ ಆಗಿ ಬೌಂಡರಿ ಗೆರೆ ದಾಟುತ್ತವೆ. ವೈಡ್ ಮತ್ತು ನೋಬಾಲ್ ಅಲ್ಲದ ನಾಲ್ಕು ಲೀಗಲ್ ಬಾಲ್'ನಲ್ಲಿ 12 ರನ್ ಹರಿದುಬರುತ್ತದೆ. ಅಲ್ಲಿಗೆ 4 ಬಾಲ್'ನಲ್ಲಿ 92 ರನ್ ಬರುತ್ತವೆ. ಆಕ್ಸಿಯಾಮ್ ತಂಡ ತೀರಾ ನಿರಾಯಾಸವಾಗಿ ಗೆಲುವಿನ ಟಾರ್ಗೆಟ್ ಮುಟ್ಟುತ್ತದೆ..
ಯಾಕಿಷ್ಟು ವೈಡ್'ಗಳು?
ಎಂಥ ಬೌಲರ್'ನೇ ಆದರೂ ಇಷ್ಟೊಂದು ಪ್ರಮಾಣದಲ್ಲಿ ವೈಡ್ ಮತ್ತು ನೋಬಾಲ್'ಗಳನ್ನು ಎಸೆಯಲು ಸಾಧ್ಯವಿಲ್ಲ. ಆಕ್ಸಿಯಾಮ್ ಮತ್ತು ಲಾಲ್ಮಾಟಿಯಾ ನಡುವಿನ ಈ ಪಂದ್ಯ ಹಲವು ವಿವಾದಗಳಿಂದ ಕೂಡಿತ್ತು. ಪಂದ್ಯ ಅಂಪೈರ್'ಗಳು ಆರಂಭದಿಂದಲೂ ಪಕ್ಷಪಾತಿ ಧೋರಣೆ ಹೊಂದಿದ್ದರು ಎಂಬುದು ಲಾಲ್ಮಾಟಿಯಾ ತಂಡದ ಆರೋಪ. ಟಾಸ್ ವೇಳೆ ತಮ್ಮ ತಂಡದ ಕ್ಯಾಪ್ಟನ್'ಗೆ ಕಾಯಿನ್ ನೋಡಲೂ ಅವಕಾಶ ಕೊಡದೆ, ಮೊದಲು ಬ್ಯಾಟಿಂಗ್ ಕಳುಹಿಸಲಾಯಿತು. 14 ಓವರ್'ಗಳ ಇನ್ನಿಂಗ್ಸಲ್ಲಿ ಅಂಪೈರ್'ಗಳು ತಮ್ಮ ತಂಡದ ವಿರುದ್ಧ ಅನೇಕ ತೀರ್ಪುಗಳನ್ನು ಕೊಟ್ಟು ಎಂದು ಲಾಲ್ಮಾಟಿಯಾ ಆಟಗಾರರ ಆರೋಪವಾಗಿದೆ. ಇದಕ್ಕೆ ಅವರು ವಿನೂತನವಾಗಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲು ಆರಿಸಿಕೊಂಡಿದ್ದು ವೈಡ್, ನೋಬಾಲ್ ತಂತ್ರಗಳನ್ನ. ಸುಜೋನ್ ಮಹಮದ್ ಅವರು ಸಮರ್ಥವಾಗಿ ತಮ್ಮ ಕೆಲಸ ನಿಭಾಯಿಸಿದರು.
(ಫೋಟೋ: ಪ್ರಾತಿನಿಧಿಕ ಮಾತ್ರ)
