ಢಾಕಾ(ಅ.10): ಬಾಂಗ್ಲಾ ಹಾಗೂ ಇಂಗ್ಲೆಂಡ್​​ ಏಕದಿನ ಸರಣಿಯ 2ನೇ ಪಂದ್ಯದಲ್ಲಿ  ಎರಡು ತಂಡದ ಆಟಗಾರರು ಕಿರಿಕ್ ಮಾಡಿಕೊಂಡಿದ್ದಾರೆ. 

ಜಾಸ್​​ ಬಟ್ಲರ್​​​ ಹಾಗೂ ಮೊಹಮ್ಮದುಲ್ಲಾ ನಡುವೆ ಮಾತಿನ ಚಕಮಕಿ ನಡೆದಿದೆ. ತಸ್ಕಿನ್​​ ಬೌಲಿಂಗ್​​ನಲ್ಲಿ  ಬಟ್ಲರ್​​​​ ಎಲ್​ಬಿ ಬಲೆಗೆ ಬಿದ್ದಾಗ ಅಂಪೈರ್​​ ನಿರಾಕರಿಸಿದರು. ನಂತರ ರಿವ್ಯೂ​​ನಲ್ಲಿ ಔಟ್​​ ಎಂದು ತೀರ್ಪು ಬಂದಾಗ ಬಾಂಗ್ಲಾ ಆಟಗಾರರು ಅತಿಯಾಗಿ ಸಂಭ್ರಮಾಚರಣೆ ಮಾಡಿದರು.

ಇದನ್ನ ಕಂಡ ಬಟ್ಲರ್​​ ಮೊಹಮ್ಮದುಲ್ಲಾ ಬಳಿ ಹೋಗಿ ಮಾತಿನ ಚಕಮಕಿ ನಡೆಸಿದರು. ಇದನ್ನ ಕಂಡ ಅಂಪೈರ್​​ ಮಧ್ಯ ಪ್ರವೇಶಿಸಿ ಪರಸ್ಥಿತಿಯನ್ನ ತಿಳಿಗೊಳಿಸಿದರು. ಆದರೆ ಪಂದ್ಯ ಮುಗಿದ ನಂತರ ಬಟ್ಲರ್ ಕ್ಷಮೆಯಾಚಿಸಿದ್ದಾರೆ.