ನವದೆಹಲಿ(ಮೇ.12): ಪ್ಲೇ-ಆಫ್‌'ಗೇರಲು ಪವಾಡದ ನಿರೀಕ್ಷೆಯಲ್ಲಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು, ಈಗಾಗಲೇ ಪ್ಲೇ-ಆಫ್ ರೇಸ್‌'ನಿಂದ ಹೊರಬಿದ್ದಿರುವ ಡೆಲ್ಲಿ ಡೇರ್'ಡೆವಿಲ್ಸ್ ವಿರುದ್ಧ ಸೆಣಸಾಡಲಿದೆ. 

10 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದಿರುವ ಆರ್'ಸಿಬಿ, ಇನ್ನುಳಿದ ನಾಲ್ಕೂ ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿ, ಇನ್ನುಳಿದ ತಂಡಗಳ ಫಲಿತಾಂಶ ತನಗೆ ಅನುಕೂಲವಾಗುವಂತೆ ಪ್ರಾರ್ಥಿಸಬೇಕಿದೆ. ಟೂರ್ನಿಯಲ್ಲಿ ತಂಡದ ಪ್ರದರ್ಶನ ನೋಡಿದರೆ, ಪ್ಲೇ-ಆಫ್ ಕನಸು ಕನಸಾಗಿಯೇ ಉಳಿಯುವ ಸಾಧ್ಯತೆಯೇ ಹೆಚ್ಚು. ತಂಡದ ಪ್ರದರ್ಶನದ ಬಗ್ಗೆ ಸ್ವತಃ ನಾಯಕ ಕೊಹ್ಲಿ ಬೇಸರಗೊಂಡಿದ್ದು, ಕೊನೆ 4 ಪಂದ್ಯಗಳಲ್ಲಾದರೂ ಅಭಿಮಾನಿಗಳ ಮನರಂಜಿಸುವುದು ಆರ್‌ಸಿಬಿ ಗುರಿಯಾಗಿದೆ. ಎಬಿ ಡಿವಿಲಿಯರ್ಸ್‌ ಮೇಲೂ ಸಹ ತಂಡ ಹೆಚ್ಚಿನ ನಿರೀಕ್ಷೆಯಿಟ್ಟಿದೆ. ಮನ್‌ದೀಪ್, ಡಿಕಾಕ್, ಮೆಕ್ಲಲಂ, ವಾಷಿಂಗ್ಟನ್ ಸುಂದರ್ ಎಲ್ಲರೂ ನಿರೀಕ್ಷೆ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. 

ಮತ್ತೊಂದೆಡೆ ಪ್ಲೇ-ಆಫ್‌’ನಿಂದ ಹೊರಬಿದ್ದಿದ್ದರೂ, ಡೆಲ್ಲಿ ಕೊನೆ 3 ಪಂದ್ಯಗಳಲ್ಲಿ ಗೆದ್ದು ಟೂರ್ನಿಗೆ ವಿದಾಯ ಹೇಳುವ ವಿಶ್ವಾಸದಲ್ಲಿದೆ. ಆಡಲು ಅವಕಾಶ ಸಿಗದ ಕೆಲ ಆಟಗಾರರನ್ನು ಮುಂದಿನ ಪಂದ್ಯಗಳಲ್ಲಿ ಆಡಿಸಲು ತಂಡ ಮುಂದಾಗಲಿದೆ.
ಸಂಭಾವ್ಯ ತಂಡ:
DD: ಪೃಥ್ವಿ ಶಾ, ರಾಯ್, ಶ್ರೇಯಸ್(ನಾಯಕ), ರಿಶಭ್, ಹರ್ಷಲ್, ಮ್ಯಾಕ್ಸ್’ವೆಲ್, ವಿಜಯ್ ಶಂಕರ್, ಪ್ಲಂಕೆಟ್, ನದೀಮ್, ಅಮಿತ್ ಮಿಶ್ರಾ, ಟ್ರೆಂಟ್ ಬೌಲ್ಟ್
RCB: ವೋಹ್ರಾ, ಪಾರ್ಥೀವ್, ಕೊಹ್ಲಿ(ನಾಯಕ), ಡಿವಿಲಿಯರ್ಸ್‌, ಮೊಯಿನ್ ಅಲಿ, ಮನ್‌'ದೀಪ್, ಗ್ರಾಂಡ್‌ಹೋಮ್, ಟಿಮ್ ಸೌಥಿ, ಉಮೇಶ್ ಯಾದವ್, ಸಿರಾಜ್, ಚಹಲ್