'ನನಗೆ ವಿಷ ಹಾಕಿದ್ರು': ಆಸ್ಟ್ರೇಲಿಯನ್ ಓಪನ್‌ಗೂ ಮುನ್ನ ಜೋಕೋ ಗಂಭೀರ ಆರೋಪ!

2022ರ ಆಸ್ಟ್ರೇಲಿಯನ್ ಓಪನ್ ವೇಳೆ ತಮ್ಮ ಆಹಾರಕ್ಕೆ ವಿಷ ಬೆರೆಸಲಾಗಿತ್ತು ಎಂದು ನೋವಾಕ್ ಜೋಕೋವಿಚ್ ಆರೋಪಿಸಿದ್ದಾರೆ. ಸೀಸ ಮತ್ತು ಪಾದರಸ ಬೆರೆಸಲಾಗಿದ್ದು, ಸರ್ಬಿಯಾಗೆ ಮರಳಿ ಪರೀಕ್ಷೆ ಮಾಡಿಸಿದಾಗ ದೇಹದಲ್ಲಿ ಭಾರಿ ಪ್ರಮಾಣದ ಲೋಹದ ಅಂಶ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. 2025ರ ಆಸ್ಟ್ರೇಲಿಯನ್ ಓಪನ್‌ನ ಮೊದಲ ಸುತ್ತಿನಲ್ಲಿ ಭಾರತೀಯ ಮೂಲದ ನಿಶೇಶ್ ಬಸವರೆಡ್ಡಿಯನ್ನು ಎದುರಿಸಲಿದ್ದಾರೆ.

Australian Open Novak Djokovic Claims he was Poisoned in 2022 kvn

ಮೆಲ್ಬರ್ನ್: 2022ರ ಆಸ್ಟ್ರೇಲಿಯನ್ ಓಪನ್ ಗ್ಯಾನ್ ಸ್ಲಾಂ ಟೆನಿಸ್ ವೇಳೆ ತಮ್ಮ ಆಹಾರಕ್ಕೆ ವಿಷ ಬೆರೆಸಲಾಗಿತ್ತು ಎಂದು 24 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ನೋವಾಕ್ ಜೋಕೋವಿಚ್ ಗಂಭೀರ ಆರೋಪ ಮಾಡಿದ್ದಾರೆ. 2022ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಪಾಲ್ಗೊಳ್ಳಲು ಸರ್ಬಿಯಾದ ಜೋಕೋ ಮೆಲ್ಬರ್ನ್‌ಗೆ ಆಗಮಿಸಿದ್ದರು. ಆದರೆ ಕೋವಿಡ್ ಲಸಿಕೆ ಹಾಕಲು ನಿರಾಕರಿಸಿದ್ದಕ್ಕೆ ಜೋಕೋಗೆ ಟೂರ್ನಿಯಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ. ಬದಲಾಗಿ ಅವರನ್ನು ಮೆಲ್ಬರ್ನ್‌ನಲ್ಲೇ ದಿಗ್ಧಂಧನದಲ್ಲಿರಿಸಿ, ಬಳಿಕ ಗಡೀಪಾರು ಮಾಡಲಾಗಿತ್ತು.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಾಜಿ ವಿಶ್ವನಂ.1 ಜೋಕೋ, 'ಮೆಲ್ಬರ್ನ್‌ ಹೋಟೆಲ್ ನಲ್ಲಿದ್ದಾಗ ನನ್ನ ಆಹಾರಕ್ಕೆ ಸೀಸ ಹಾಗೂ ಪಾದರಸ ಬೆರೆಸಲಾಗಿತ್ತು. ಇದರಿಂದಾಗಿ ನನ್ನ ಆರೋಗ್ಯದಲ್ಲಿ ಏರುಪೇರಾಗಿತ್ತು.ಸರ್ಬಿಯಾಗೆ ಮರಳಿದ ಬಳಿಕ ಪರೀಕ್ಷೆ ಮಾಡಿಸಿದಾಗ ನನ್ನ ದೇಹದಲ್ಲಿ ಭಾರಿ ಪ್ರಮಾಣದ ಲೋಹದ ಅಂಶ ಪತ್ತೆಯಾಗಿತ್ತು. ಆಹಾರದಲ್ಲೇ ಸೀಸ, ಪಾದರಸ ಬೆರೆಸಿದ್ದು ಆಗ ಗೊತ್ತಾ ಯಿತು. ಆದರೆ ಈ ಬಗ್ಗೆ ನಾನು ಯಾವತ್ತೂ ಸಾರ್ವಜನಿಕವಾಗಿ ಮಾತನಾಡಿಲ್ಲ' ಎಂದು ಆರೋಪಿಸಿದ್ದಾರೆ.

2022ರಲ್ಲಿ ಗಡೀಪಾರಾಗಿದ್ದ ಜೋಕೋವಿಚ್, 2023ರಲ್ಲಿ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದರು. ಕಳೆದ ವರ್ಷ ಸೆಮಿಫೈನಲ್‌ನಲ್ಲಿ ಸೋತಿದ್ದರು. ಅವರು ಈ ವರೆಗೂ 10 ಬಾರಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿದ್ದಾರೆ.

ಜೋಕೋವಿಚ್‌ಗೆ ಮೊದಲ ಸುತ್ತಿನಲ್ಲಿ ಭಾರತೀಯ ಮೂಲದ ನಿಶೇಶ್ ಸವಾಲು

2025ರ ಮೊದಲ ಗ್ರಾನ್‌ಸ್ಲಾಂ ಟೂರ್ನಿಯಾಗಿರುವ ಆಸ್ಟ್ರೇಲಿಯನ್ ಓಪನ್ ಟೆನಿಸ್ ನ ಡ್ರಾ ಬಿಡುಗಡೆಗೊಂಡಿದ್ದು, 10 ಬಾರಿ ಚಾಂಪಿಯನ್ ನೋವಾಕ್ ಜೋಕೋವಿಚ್ ಪುರುಷರ ಸಿಂಗಲ್‌ ಮೊದಲ ಸುತ್ತಿನಲ್ಲಿ ಭಾರತೀಯ ಮೂಲದ ನಿಶೇಶ್ ಬಸವರೆಡ್ಡಿ ವಿರುದ್ದ ಸೆಣಸಾಡಲಿದ್ದಾರೆ.

ಗುರುವಾರ ಆಯೋಜಕರು ಟೂರ್ನಿಯ ಡ್ರಾ ಪ್ರಕಟಿಸಿದರು. ಜೋಕೋವಿಚ್ ಹಾಗೂ ಸಿನ್ನರ್ ಬೇರೆ ಬೇರೆ ವಿಭಾಗಗಳಲ್ಲಿದ್ದು, ಟೂರ್ನಿಯ ಎಲ್ಲಾ ಪಂದ್ಯಗಳಲ್ಲೂ ಗೆದ್ದರೆ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಪರಸ್ಪರ ಎದುರಾಗಲಿದ್ದಾರೆ. ಜೋಕೋ ಹಾಗೂ ಕಾರ್ಲೊಸ್ ಆಲ್ಕರಜ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುವ ಸಾಧ್ಯತೆಯಿದೆ.
 

Latest Videos
Follow Us:
Download App:
  • android
  • ios