Asianet Suvarna News Asianet Suvarna News

Australian Open 2024: ನೋವಾಕ್ ಜೋಕೋವಿಚ್ ಪ್ರಿ ಕ್ವಾರ್ಟರ್‌ಗೆ ಎಂಟ್ರಿ

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ 3ನೇ ಸುತ್ತಿನಲ್ಲಿ ವಿಶ್ವ ನಂ.1, ಸರ್ಬಿಯಾದ ಜೋಕೋ 30ನೇ ಶ್ರೇಯಾಂಕಿತ, ಅರ್ಜೆಂಟೀನಾದ ಥೋಮಸ್‌ ಮಾರ್ಟಿನ್‌ ವಿರುದ್ಧ 6-3, 6-3, 7-6(7/2) ನೇರ ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಇದರೊಂದಿಗೆ 10 ಬಾರಿ ಚಾಂಪಿಯನ್‌ ಜೋಕೋ 16ನೇ ಬಾರಿ ಆಸ್ಟ್ರೇಲಿಯನ್‌ ಓಪನ್‌ನಲ್ಲಿ 4ನೇ ಸುತ್ತಿಗೇರಿದರು.

Australian Open 2024 Novak Djokovic enters pre quarter final kvn
Author
First Published Jan 20, 2024, 10:00 AM IST

ಮೆಲ್ಬರ್ನ್‌(ಜ.20): ದಾಖಲೆಯ 24 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ನೋವಾಕ್ ಜೋಕೋವಿಚ್‌ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಹಾಲಿ ಚಾಂಪಿಯನ್‌ ಅರೈನಾ ಸಬಲೆಂಕಾ ಕೂಡಾ 4ನೇ ಸುತ್ತಿಗೇರಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ 3ನೇ ಸುತ್ತಿನಲ್ಲಿ ವಿಶ್ವ ನಂ.1, ಸರ್ಬಿಯಾದ ಜೋಕೋ 30ನೇ ಶ್ರೇಯಾಂಕಿತ, ಅರ್ಜೆಂಟೀನಾದ ಥೋಮಸ್‌ ಮಾರ್ಟಿನ್‌ ವಿರುದ್ಧ 6-3, 6-3, 7-6(7/2) ನೇರ ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಇದರೊಂದಿಗೆ 10 ಬಾರಿ ಚಾಂಪಿಯನ್‌ ಜೋಕೋ 16ನೇ ಬಾರಿ ಆಸ್ಟ್ರೇಲಿಯನ್‌ ಓಪನ್‌ನಲ್ಲಿ 4ನೇ ಸುತ್ತಿಗೇರಿದರು.

ಇದೇ ವೇಳೆ ಸ್ಟೆಫಾನೊಸ್‌ ಸಿಟ್ಸಿಪಾಸ್‌, ಜಾನಿಕ್‌ ಸಿನ್ನರ್‌, ಕರೇನ್‌ ಕಚನೋವ್‌, ಆ್ಯಂಡ್ರೆ ರುಬ್ಲೆವ್‌, ಕೂಡಾ 3ನೇ ಸುತ್ತಿನಲ್ಲಿ ಜಯಗಳಿಸಿದರು. ಇನ್ನು, ಮಹಿಳಾ ಸಿಂಗಲ್ಸ್‌ನಲ್ಲಿ ಬೆಲಾರಸ್‌ನ ಸಬಲೆಂಕಾ, ಅಮೆರಿಕದ ಕೊಕೊ ಗಾಫ್‌, ರಷ್ಯಾದ 16ರ ಮಿರ್ರಾ ಆ್ಯಂಡ್ರೀವಾ 4ನೇ ಸುತ್ತು ಪ್ರವೇಶಿಸಿದರು.

Ranji Trophy: ಗೋವಾ ಮೇಲೆ ಕರ್ನಾಟಕ ಪ್ರಾಬಲ್ಯ

01ನೇ ಟೆನಿಸಿಗ: ಜೋಕೋ ಆಸ್ಟ್ರೇಲಿಯನ್‌ ಓಪನ್‌ನಲ್ಲಿ 100ನೇ ಪಂದ್ಯವಾಡಿದರು. ಎಲ್ಲಾ 4 ಗ್ರ್ಯಾನ್‌ಸ್ಲಾಂಗಳಲ್ಲಿ ತಲಾ 100 ಪಂದ್ಯವಾಡಿದ ಏಕೈಕ ಟೆನಿಸಿಗ ಜೋಕೋ.

ಬೋಪಣ್ಣ ಜೋಡಿ 3ನೇ ಸುತ್ತಿಗೆ ಲಗ್ಗೆ

ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೊತೆಗೂಡಿ ಪುರುಷರ ಡಬಲ್ಸ್‌ನಲ್ಲಿ ಆಡುತ್ತಿರುವ ಕರ್ನಾಟಕದ ರೋಹನ್‌ ಬೋಪಣ್ಣ, ಟೂರ್ನಿಯಲ್ಲಿ 3ನೇ ಸುತ್ತು ಪ್ರವೇಶಿಸಿದರು. ಅವರು 2ನೇ ಸುತ್ತಿನಲ್ಲಿ ಆಸ್ಟ್ರೇಲಿಯಾದ ಜಾನ್‌ ಮಿಲ್ಮನ್‌-ಎಡ್ವರ್ಡ್ ವಿಂಟರ್‌ ವಿರುದ್ಧ 6-2, 6-4ರಲ್ಲಿ ಜಯಗಳಿಸಿದರು. ಭಾರತದ ಶ್ರೀರಾಮ್‌ ಬಾಲಾಜಿ-ರೊಮಾನಿಯಾದ ವಿಕ್ಟರ್‌ ಕಾರ್ನೀ ಕೂಡಾ ಶುಭಾರಂಭ ಮಾಡಿದರು.

ಬೆಂಗ್ಳೂರು ಓಪನ್‌ ಟೆನಿಸ್‌: ಸೆಮಿಫೈನಲ್‌ಗೆ ಋುತುಜಾ

ಬೆಂಗಳೂರು: ಬೆಂಗಳೂರು ಓಪನ್‌ ಅಂತಾರಾಷ್ಟ್ರೀಯ ಮಹಿಳಾ ಟೆನಿಸ್‌ ಟೂರ್ನಿಯಲ್ಲಿ ಭಾರತದ ಋುತುಜಾ ಭೋಸಲೆ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಋುತುಜಾ, ಜಪಾನ್‌ನ ಮೊಯುಕಾ ಉಚಿಜಿಮಾ ವಿರುದ್ಧ 6-2, 5-7, 7-6 (5) ಅಂತರದಲ್ಲಿ ಜಯ ಗಳಿಸಿದರು. ಉಳಿದಂತೆ ಜಪಾನ್‌ನ ನಹೊ ಸಾಟೊ, ಲಾಟ್ವಿಯಾದ ದರ್ಜಾ ಸೆಮೆನಿಸ್ಟಜಾ, ಫ್ರಾನ್ಸ್‌ನ ಕ್ಯಾರೊಲೆ ಮೊನೆಟ್‌ ಕೂಡಾ ಉಪಾಂತ್ಯ ತಲುಪಿದ್ದಾರೆ.

IPL 2024 ಟೂರ್ನಿಗೂ ಮುನ್ನ ಗುಡುಗಿದ RCB ಕ್ರಿಕೆಟಿಗ, ಕೇವಲ 42 ಎಸೆತದಲ್ಲಿ ಶತಕ..! ಬೌಂಡ್ರಿ-ಸಿಕ್ಸರ್ ವಿಡಿಯೋ ವೈರಲ್

ಇನ್ನು ಡಬಲ್ಸ್ ಸೆಮಿಫೈನಲ್‌ನಲ್ಲಿ ಚೈನೀಸ್‌ ತೈಪೆಯ ಯುಯಾನ್‌ ಲಿ-ಎರ್ರಿ ಶಿಮಿಜು ಜೋಡಿ ಜಪಾನ್‌ನ ಅಮಾಂಡಿನ್‌ ಹಿಸ್ಸೆ-ಡ್ಯಾಲಿಲಾ ಜಕುಪೊವಿಕ್‌ ವಿರುದ್ಧ ಗೆದ್ದು ಫೈನಲ್‌ ತಲುಪಿದೆ.
 

Follow Us:
Download App:
  • android
  • ios