‘ಇಂಗ್ಲೆಂಡ್‌ನಲ್ಲಿ ಕೊಹ್ಲಿಯ ನೆಚ್ಚಿನ ಹೊಡೆತ ಯಾವುದೆಂದರೆ, ಆಫ್‌ಸ್ಟಂಪ್‌ನಿಂದ ಆಚೆ ಹೋಗುವ ಚೆಂಡನ್ನು ಕೆಣಕಿ, ಸ್ಲಿಪ್‌ನಲ್ಲಿ ಕ್ಯಾಚ್ ನೀಡುವುದು’ ಎಂದು ಫಾಕ್ಸ್ ಸ್ಪೋರ್ಟ್ಸ್ ಆಸ್ಟ್ರೇಲಿಯಾ ಸುದ್ದಿ ಪ್ರಕಟಿಸಿದೆ. 

ಸಿಡ್ನಿ(ಆ.01]: ಆಸ್ಟ್ರೇಲಿಯಾದ ಮಾಧ್ಯಮಗಳು ಅನಗತ್ಯವಾಗಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕಾಲೆಳೆದಿವೆ. ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಆರಂಭಕ್ಕೂ ಮುನ್ನ, ಮಂಗಳವಾರ ಕೊಹ್ಲಿ ವಿರುದ್ಧ ಲೇಖನಗಳನ್ನು ಪ್ರಕಟಿಸಿವೆ. 

‘ಇಂಗ್ಲೆಂಡ್‌ನಲ್ಲಿ ಕೊಹ್ಲಿಯ ನೆಚ್ಚಿನ ಹೊಡೆತ ಯಾವುದೆಂದರೆ, ಆಫ್‌ಸ್ಟಂಪ್‌ನಿಂದ ಆಚೆ ಹೋಗುವ ಚೆಂಡನ್ನು ಕೆಣಕಿ, ಸ್ಲಿಪ್‌ನಲ್ಲಿ ಕ್ಯಾಚ್ ನೀಡುವುದು’ ಎಂದು ಫಾಕ್ಸ್ ಸ್ಪೋರ್ಟ್ಸ್ ಆಸ್ಟ್ರೇಲಿಯಾ ಸುದ್ದಿ ಪ್ರಕಟಿಸಿದೆ. 

ಈ ಹಿಂದೆ ಆಸ್ಟ್ರೇಲಿಯಾದ ಮಾಧ್ಯಮಗಳು ಕೊಹ್ಲಿಯನ್ನು ‘ಕ್ರಿಕೆಟ್‌ನ ಡೊನಾಲ್ಡ್ ಟ್ರಂಪ್ ’ ಎಂದು ಕರೆದಿದ್ದವು.