ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಾಂಗ್ಲಾ, ತಂಡಕ್ಕೆ ಹೆಚ್ಚಿನ ಭದ್ರತೆ ಒದಗಿಸಿದೆ.

ಚಿತ್ತಗಾಂಗ್(ಸೆ.05): ಬಾಂಗ್ಲಾದೇಶ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರಯಾಣಿಸುತ್ತಿದ್ದ ಬಸ್ ಮೇಲೆ ಕಲ್ಲು ತೂರಾಟ ನಡೆದ ಘಟನೆ ಸೋಮವಾರ ನಡೆದಿದೆ.

ಎರಡನೇ ಟೆಸ್ಟ್‌'ನ ಮೊದಲ ದಿನದಾಟ ಮುಕ್ತಾಯಗೊಂಡ ಬಳಿಕ ತಂಡ ಹೋಟೆಲ್‌'ಗೆ ವಾಪಸ್ಸಾಗುತ್ತಿದ್ದ ವೇಳೆ ದುಷ್ಕರ್ಮಿಗಳು ಬಸ್‌'ನ ಕಿಟಕಿ ಗಾಜು ಒಡೆದಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ ಭದ್ರತಾ ನಿರ್ವಾಹಕ ಸೀನ್ ಕ್ಯಾರೊಲ್ ‘ಬಾಂಗ್ಲಾದೇಶ ನೀಡುತ್ತಿರುವ ಭದ್ರತೆ ಬಗ್ಗೆ ನಮಗೆ ಸಮಾಧಾನವಿದೆ. ಯಾರೂ ಗಾಯಗೊಂಡಿಲ್ಲ’ ಎಂದಿದ್ದಾರೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಾಂಗ್ಲಾ, ತಂಡಕ್ಕೆ ಹೆಚ್ಚಿನ ಭದ್ರತೆ ಒದಗಿಸಿದೆ.