ಮಾಜಿ ಸ್ಪರ್ಧಾತ್ಮಕ ಈಜುಪಟು ಹಾಗೂ ವಾಟರ್ ಪೋಲ್ ಆಟಗಾರ್ತಿಯಾಗಿರುವ ವಿಲ್ಲೀಸ್, ಕಳೆದ ಐದು ವರ್ಷಗಳಿಂದ ಆಸೀಸ್ ತಂಡದ ನಾಯಕ ಸ್ಟೀವ್ ಸ್ಮಿತ್'ಗೆ ಸಾಥ್ ನೀಡುತ್ತಾ ಬಂದಿದ್ದಾರೆ.
ಮೆಲ್ಬೋರ್ನ್(ಜೂ.29): ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ಟೀವ್ ಸ್ಮಿತ್ ತಮ್ಮ ಬಹುಕಾಲದ ಸಂಗಾತಿ ಡ್ಯಾನಿ ವಿಲ್ಲೀಸ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ಟ್ವಿಟರ್ ಹಾಗೂ ಇನ್'ಸ್ಟಾ ಗ್ರಾಂನಲ್ಲಿ ಈ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿರುವ ಸ್ಮಿತ್, ಇಂದು ಡ್ಯಾನಿ ಎದುರು ಮಂಡಿಯೂರಿದೆ, ಆಕೆ ಸಮ್ಮತಿ ಸೂಚಿಸಿದಳು ಎಂದು ಸಂಕ್ಷಿಪ್ತವಾಗಿ ಬರೆದುಕೊಂಡಿದ್ದಾರೆ.
ಮಾಜಿ ಸ್ಪರ್ಧಾತ್ಮಕ ಈಜುಪಟು ಹಾಗೂ ವಾಟರ್ ಪೋಲ್ ಆಟಗಾರ್ತಿಯಾಗಿರುವ ವಿಲ್ಲೀಸ್, ಕಳೆದ ಐದು ವರ್ಷಗಳಿಂದ ಆಸೀಸ್ ತಂಡದ ನಾಯಕ ಸ್ಟೀವ್ ಸ್ಮಿತ್'ಗೆ ಸಾಥ್ ನೀಡುತ್ತಾ ಬಂದಿದ್ದಾರೆ. ಸ್ಮಿತ್ ಯಶಸ್ಸಿಗೆ ವಿಲ್ಲೀಸ್ ಪ್ರಮುಖ ಆಧಾರಸ್ತಂಭವೆಂದು ಗುರುತಿಸಿಕೊಂಡಿದ್ದಾರೆ.
