ಆ್ಯಷಸ್‌ 2019 ಸರಣಿ ಆಸ್ಟ್ರೇಲಿಯಾ ತಂಡ ಪ್ರಕಟ

ಇಂಗ್ಲೆಂಡ್ ವಿರುದ್ಧದ ಆ್ಯಷಸ್ ಸರಣಿಗೆ 17 ಆಟಗಾರರನ್ನೊಳಗೊಂಡ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ಆ್ಯಷಸ್ ವೇಳಾಪಟ್ಟಿ, ಆಸ್ಟ್ರೇಲಿಯಾ ತಂಡದ ಸಂಪೂರ್ಣ ವಿವರ ಇಲ್ಲಿದೆ ನೋಡಿ...

Australia vs England Ashes 2019 Aussies Test squad announced

ಲಂಡನ್‌[ಜು.27]: 2018ರಲ್ಲಿ ಚೆಂಡು ವಿರೂಪ ನಡೆಸಿ ಒಂದು ವರ್ಷ ನಿಷೇಧ ಅನುಭವಿಸಿದ್ದ ಸ್ಟೀವ್‌ ಸ್ಮಿತ್‌, ಡೇವಿಡ್‌ ವಾರ್ನರ್‌ ಹಾಗೂ ಕ್ಯಾಮರೂನ್‌ ಬೆನ್‌ಕ್ರಾಫ್ಟ್‌ ನಿಷೇಧದ ಬಳಿಕ ಮೊದಲ ಬಾರಿಗೆ ಆಸ್ಪ್ರೇಲಿಯಾ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 

ನ್ಯೂಜಿಲೆಂಡ್‌ ಮೇಲೆ ಬೆಟ್‌ ಕಟ್ಟಿದ್ದವರ ಹಣ ವಾಪಸ್‌!

ಶುಕ್ರವಾರ ಕ್ರಿಕೆಟ್‌ ಆಸ್ಪ್ರೇಲಿಯಾ, ಇಂಗ್ಲೆಂಡ್‌ ವಿರುದ್ಧದ 5 ಪಂದ್ಯಗಳ ಆ್ಯಷಸ್‌ ಸರಣಿಗೆ 17 ಆಟಗಾರರ ತಂಡವನ್ನು ಪ್ರಕಟಗೊಳಿಸಿತು. ಆ.1ರಿಂದ ಬರ್ಮಿಂಗ್‌ಆಗಸ್ಟಹ್ಯಾಮ್‌ನಲ್ಲಿ ಮೊದಲ ಟೆಸ್ಟ್‌ ಆರಂಭಗೊಳ್ಳಲಿದೆ.

2001ರ ಬಳಿಕ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ನೆಲದಲ್ಲಿ ಆ್ಯಷಸ್ ಸರಣಿ ಜಯಿಸಿಲ್ಲ. ಇದೀಗ ಟಿಮ್ ಪೈನೆ ನೇತೃತ್ವದ ಆಸೀಸ್ ತಂಡ ಹಾಲಿ ಏಕದಿನ ಚಾಂಪಿಯನ್ಸ್ ಇಂಗ್ಲೆಂಡ್ ಅವರದ್ಧೇ ನೆಲದಲ್ಲಿ ಸವಾಲೊಡ್ಡಲು ರೆಡಿಯಾಗಿದೆ.

ಆ್ಯಷಸ್ ಸರಣಿಗೆ 17 ಆಟಗಾರರನ್ನೊಳಗೊಂಡ ಆಸ್ಟ್ರೇಲಿಯಾ ತಂಡ ಹೀಗಿದೆ:

ಟಿಮ್ ಪೈನೆ[ನಾಯಕ/ವಿಕೆಟ್ ಕೀಪರ್], ಕ್ಯಾಮರೋನ್ ಬೆನ್’ಕ್ರಾಫ್ಟ್, ಪ್ಯಾಟ್ ಕಮಿನ್ಸ್, ಮಾರ್ಕಸ್ ಹ್ಯಾರಿಸ್, ಜೋಸ್ ಹ್ಯಾಜಲ್’ವುಡ್, ಟ್ರಾವೀಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲಾಬಸ್’ಚಾಗ್ನೆ, ನೇಥನ್ ಲಯನ್, ಮಿಚೆಲ್ ಮಾರ್ಷ್, ಮಿಚೆಲ್ ನೀಸರ್, ಜೇಮ್ಸ್ ಪ್ಯಾಟಿನ್’ಸನ್, ಪೀಟರ್ ಸಿಡಲ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್.  

ಆ್ಯಷಸ್ ಸರಣಿಯ ವೇಳಾಪಟ್ಟಿ ಹೀಗಿದೆ ನೋಡಿ...

ಮೊದಲ ಟೆಸ್ಟ್: ಆಗಸ್ಟ್ 01-05- ಎಡ್ಜ್ ಬಾಸ್ಟನ್

ಎರಡನೇ ಟೆಸ್ಟ್: ಆಗಸ್ಟ್ 14-18- ಲಾರ್ಡ್ಸ್

ಮೂರನೇ ಟೆಸ್ಟ್: ಆಗಸ್ಟ್ 22-26- ಹೆಡಿಂಗ್ಲಿ

ನಾಲ್ಕನೇ ಟೆಸ್ಟ್: ಸೆಪ್ಟಂಬರ್ 04-08- ಓಲ್ಡ್ ಟ್ರಾಫೋರ್ಡ್

ಐದನೇ ಟೆಸ್ಟ್: ಸೆಪ್ಟಂಬರ್ 12-16- ಓವಲ್

Latest Videos
Follow Us:
Download App:
  • android
  • ios