ದೆಹಲಿ(ಮಾ.13): ಭಾರತ ವಿರುದ್ದದ 5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 9 ವಿಕೆಟ್ ನಷ್ಟಕ್ಕೆ 272 ರನ್ ಸಿಡಿಸಿದೆ. ಈ ಮೂಲಕ ದೆಹಲಿಯ ಫಿರೋಝ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ನಿರ್ಣಾಯಕ ಪಂದ್ಯದಲ್ಲಿ ಭಾರತದ ಗೆಲುವಿಗೆ 273 ರನ್ ಟಾರ್ಗೆಟ್ ನೀಡಲಾಗಿದೆ. 

ಇದನ್ನೂ ಓದಿ: ಚುನಾವಣಾ ದಿನಾಂಕ ನಿಗದಿ ಬೆನ್ನಲ್ಲೇ ಸಚಿನ್, ಕೊಹ್ಲಿ ನೆರವು ಕೇಳಿದ ಮೋದಿ!

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಆಸ್ಟ್ರೇಲಿಯಾ ಅತ್ಯುತ್ತಮ ಆರಂಭ ಪಡೆಯಿತು. ನಾಯಕ ಆ್ಯರೋನ್ ಫಿಂಚ್ ಹಾಗೂ ಉಸ್ಮಾನ್ ಖವಾಜ ಮೊದಲ ವಿಕೆಟ್‌ಗೆ 76 ರನ್ ಜೊತೆಯಾಟ ನೀಡಿದರು. ಅಬ್ಬರಿಸುತ್ತಿದ್ದ ಈ ಜೋಡಿಯನ್ನ ಬೇರ್ಪಡಿಸುವಲ್ಲಿ ರವೀಂದ್ರ ಜಡೇಜಾ ಯಶಸ್ವಿಯಾದರು. ಫಿಂಚ್ 27 ರನ್ ಸಿಡಿಸಿ ಔಟಾದರು.

ಮೊಹಾಲಿ ಬಳಿಕ ದೆಹಲಿಯಲ್ಲೂ ಅಬ್ಬರಿಸಿದ ಖವಾಜ ಭರ್ಜರಿ ಶತಕ ಸಿಡಿಸಿದರು. 106 ಎಸೆತದಲ್ಲಿ ಖವಾಜ 10 ಬೌಂಡರಿ ಹಾಗೂ 2 ಸಿಕ್ಸರ್ ನರೆವಿನಿಂದ 100 ರನ್ ಬಾರಿಸಿ ಔಟಾದರು.  ಮ್ಯಾಕ್ಸ್‌ವೆಲ್ ಕೇವಲ 1 ರನ್‌ಗೆ ನಿರ್ಗಮಿಸಿದರು. ಅರ್ಧಶತಕ ಸಿಡಿಸಿ ಆಸರೆಯಾಗಿದ್ದ ಪೀಟರ್‌ ಹ್ಯಾಂಡ್ಸ್‌ಕಾಂಬ್ 52 ರನ್‌ಗಳಿಸಿ ಔಟಾದರು.

ಇದನ್ನೂ ಓದಿ: ಈ 2 IPL ತಂಡಗಳ ತವರು ಪಂದ್ಯಗಳು ಶಿಫ್ಟ್..?

300ರ ಗಡಿ  ದಾಟೋ ಸೂಚನೆ ನೀಡಿದ್ದ ಆಸಿಸ್ ಅಬ್ಬರಕ್ಕೆ ಕೊನೆಗೂ ಟೀಂ ಇಂಡಿಯಾ ಬೌಲರ್‌ಗಳು ಕಡಿವಾಣ ಹಾಕಿದರು. ಕಳೆದ ಪಂದ್ಯ ಹೀರೋ ಆಶ್ಟನ್ ಟರ್ನರ್ 20, ಮಾರ್ಕಸ್ ಸ್ಟೊಯ್ನಿಸ್ 20, ಆಲೆಕ್ಸ್ ಕ್ಯಾರಿ 3, ಪ್ಯಾಟ್ ಕಮಿನ್ಸ್ 15 ರನ್ ಸಿಡಿಸಿ ಔಟಾದರು. ಈ ಮೂಲಕ ಆಸಿಸ್ 9 ವಿಕೆಟ್ ನಷ್ಟಕ್ಕೆ 272 ರನ್ ಸಿಡಿಸಿತು. ಭಾರತದ ಪರ ಭುವನೇಶ್ವರ್ 3, ಮೊಹಮ್ಮದ್ ಶಮಿ 2 ಹಾಗೂ ರವೀಂದ್ರ ಜಡೇಜಾ 2 ವಿಕೆಟ್ ಪಡೆದರು.