ಮೆಲ್ಬೋರ್ನ್(ಮಾ.02): ಪುಲ್ವಾಮಾ ದಾಳಿ, ಗಡಿಯಲ್ಲಿ ಪಾಕ್ ಅಪ್ರಚೋದಿತ ದಾಳಿ ಸೇರಿದಂತೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿದೆ. ಉಗ್ರರಿಗೆ ಪಾಠ ಕಲಿಸುವವರೆಗೂ ಪಾಕಿಸ್ತಾನ ಜೊತೆ ಯಾವುದೇ ಮಾತುಕತೆ ಇಲ್ಲ ಎಂದು ಭಾರತ ಸ್ಪಷ್ಟವಾಗಿ ಹೇಳಿದೆ. ಇಂಡೋ-ಪಾಕ್ ಸಮಸ್ಯೆಯಿಂದ 2019ರ ವಿಶ್ವಕಪ್ ಪಂದ್ಯದ ಮೇಲೆ ಕಾರ್ಮೋಡ ಆವರಿಸಿದೆ.

ಇದನ್ನೂ ಓದಿ: ಮತ್ತೊಮ್ಮೆ ಭಾರತೀಯರ ಮನಗೆದ್ದ ಸಚಿನ್ ತೆಂಡುಲ್ಕರ್

ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯ ಬಹಿಷ್ಕರಿಸುವಂತೆ ಆಗ್ರಹ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಇಂಡೋ-ಪಾಕ್ ಪಂದ್ಯ ಯಶಸ್ವಿಯಾಗಿ ನಡೆಯುವಂತೆ ಪ್ರಾರ್ಥಿಸುವುದಾಗಿ ಹೇಳಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ಸರ್ಕಾರ ಈ ಕುರಿತು ಅಂತಿಮ ತಿರ್ಮಾನ ತೆಗೆದುಕೊಳ್ಳಲಿ. ಆದರೆ ಕ್ರಿಕೆಟ್ ಮುಂದುವರಿಯಲಿ ಎಂದಿದ್ದಾರೆ.

ಇದನ್ನೂ ಓದಿ: ರೋಹಿತ್ ಶರ್ಮಾ ಟ್ರೋಲ್ ಮಾಡಿದ ಮುಂಬೈ ಇಂಡಿಯನ್ಸ್!

ಭಾರತ ಹಾಗೂ ಪಾಕಿಸ್ತಾನ ಬಲಿಷ್ಠ  ತಂಡಗಳು. 2019ರ ವಿಶ್ವಕಪ್ ಟೂರ್ನಿಯಲ್ಲಿ ಇವರ ಹೋರಾಟವೇ ತುಂಬಾ ಮುಖ್ಯ. ಕ್ರೀಡೆಯನ್ನ ಬಹಿಷ್ಕರಿಸುವುದು ಉತ್ತಮವಲ್ಲ ಎಂದು ಹೇಡನ್ ಹೇಳಿದ್ದಾರೆ.  ಹೆಚ್ಚಿನ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪಾಕ್ ಜೊತೆ ಯಾವುದೇ ವ್ಯವಹಾರ ಬೇಡ ಎಂದು ಆಗ್ರಹಿಸುತ್ತಿದ್ದಾರೆ.