ಭಾರತದ ಪಾಲಿಗೆ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯವು ಸೆಮಿಫೈನಲ್ ಹಂತ ಪ್ರವೇಶಿಸಲು ಮಹತ್ವದ್ದಾಗಿದೆ.
ಬ್ರಿಸ್ಟಲ್(ಜು.12): ಬ್ಯಾಟಿಂಗ್ ಹಾಗೂ ಬೌಲಿಂಗ್'ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ವನಿತೆಯರ ತಂಡ ಭಾರತವನ್ನು 8 ವಿಕೆಟ್'ಗಳ ಅಂತರದಲ್ಲಿ ಮಣಿಸುವ ಮೂಲಕ ಮಹಿಳೆಯರ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್'ಗಳಲ್ಲಿ 226 ರನ್'ಗಳ ಸಾಧಾರಣ ಮೊತ್ತ ಕಲೆಹಾಕಿತು. ಪೂನಮ್ ರಾವುತ್ ಭರ್ಜರಿ ಶತಕ ಬಾರಿಸಿದರೆ, ನಾಯಕಿ ಮಿಥಾಲಿ ರಾಜ್ 69 ರನ್ ಗಳಿಸಿದರು. ಡೆತ್ ಓವರ್'ನಲ್ಲಿ ದಿಢೀರ್ ಕುಸಿತ ಕಂಡ ವನಿತೆಯರ ತಂಡ 226 ರನ್ ಗಳಿಸಲಷ್ಟೇ ಶಕ್ತವಾಯಿತು.
ಸುಲಭ ಗುರಿ ಬೆನ್ನತ್ತಿದ ನಾಯಕಿ ಮೆಗ್ ಲ್ಯಾನಿಂಗ್ ಹಾಗೂ ಎಲೈಸಿ ಪೆರ್ರಿ ಅರ್ಧಶತಕಗಳ ನೆರವಿನಿಂದ ಆಸ್ಟ್ರೇಲಿಯಾ ಕೇವಲ 2 ವಿಕೆಟ್ ಕಳೆದುಕೊಂಡು ಇನ್ನೂ 29 ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಈ ಗೆಲುವಿನ ಮೂಲಕ ಸೆಮಿಫೈನಲ್ ಹಂತ ಪ್ರವೇಶಿಸಿದ ಮೊದಲ ತಂಡ ಎಂಬ ಗೌರವಕ್ಕೂ ಆಸೀಸ್ ಪಡೆ ಪಾತ್ರವಾಯಿತು.
ಸತತ ಎರಡು ಸೋಲು ಕಂಡಿರುವ ಮಿಥಾಲಿ ರಾಜ್ ಪಡೆಯು ಮುಂದಿನ ಪಂದ್ಯದಲ್ಲಿ ಕಠಿಣ ಸ್ಪರ್ಧಿ ಎನಿಸಿರುವ ನ್ಯೂಜಿಲ್ಯಾಂಡ್ ವಿರುದ್ಧ ಸೆಣಸಲಿದೆ. ಭಾರತದ ಪಾಲಿಗೆ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯವು ಸೆಮಿಫೈನಲ್ ಹಂತ ಪ್ರವೇಶಿಸಲು ಮಹತ್ವದ್ದಾಗಿದೆ.
ಸಂಕ್ಷಿಪ್ತ ಸ್ಕೋರ್:
ಭಾರತ: 226/7
ಪೂನಮ್ ರಾವತ್: 106
ಮಿಥಾಲಿ ರಾಜ್ : 69,
ಪೆರ‌್ರಿ: 27/2
ಆಸ್ಟ್ರೇಲಿಯಾ :227/2
ಲ್ಯಾನಿಂಗ್: 76
ಪೆರ‌್ರಿ 60
ಪೂನಮ್ ಯಾದವ್ :46/1
