ಫಿಫಾ ವಿಶ್ವಕಪ್ 2018: 40 ವರ್ಷಗಳ ಬಳಿಕ ಗೆಲುವಿನ ಸಿಹಿ ಕಂಡ ಪೆರು

Australia 0-2 Peru: Paolo Guerrero and Andre Carrillo earn first World Cup win for 40 years
Highlights

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಪೆರು ತಂಡದ ಹೋರಾಟಕ್ಕೆ ಆಸ್ಟ್ರೇಲಿಯಾ ಬೆಚ್ಚಿ ಬಿದ್ದಿದೆ. ಗೆಲುವಿನ ವಿಶ್ವಾಸದಲ್ಲಿದ್ದ ಆಸಿಸ್ ತಂಡಕ್ಕೆ ಪೆರು ಶಾಕ್ ನೀಡಿದ್ದು ಹೇಗೆ? ಈ ರೋಚಕ ಹೋರಾಟದ ಹೈಲೈಟ್ಸ್ ಇಲ್ಲಿದೆ.

ರಷ್ಯಾ(ಜೂ.26): ಫಿಫಾ ವಿಶ್ವಕಪ್ ಟೂರ್ನಿಯಲ್ಲಿ 40 ವರ್ಷಗಳ ಗೆಲುವಿನ ಕೊರಗಿಗೆ ಪೆರು ಅಂತ್ಯಹಾಡಿದೆ. ಆಸ್ಟ್ರೇಲಿಯಾ ವಿರುದ್ಧದ ರೋಚಕ ಹೋರಾಟದದಲ್ಲಿ ಪೆರು 2-0 ಅಂತರದಲ್ಲಿ ಗೆಲುವು ಸಾಧಿಸಿದೆ.

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಮುಖಾಮುಖಿಯಾದ ಆಸ್ಟ್ರೇಲಿಯಾ ಹಾಗೂ ಪೆರು ರೋಚಕ ಹೋರಾಟ ನೀಡಿತು. ಆದರೆ ಆರಂಭದಲ್ಲೇ ಪೆರು ಮೇಲುಗೈ ಸಾಧಿಸಿತು. ಮೊದಲಾರ್ಧದಲ್ಲಿ ಆಸ್ಟ್ರೇಲಿಯಾ 57 ಪ್ರತಿಶತ ಬಾಲ್ ಪೊಸಿಶನ್ ಇಟ್ಟುಕೊಂಡಿದ್ದರೂ, ಪೆರು 1 ಗೋಲು ಸಿಡಿಸಿ ಮುನ್ನಡೆ ಕಾಯ್ದುಕೊಂಡಿತು.

18ನೇ ನಿಮಿಷದಲ್ಲಿ ಪೆರು ತಂಡದ ಆಂಡ್ರೆ ಕಾರ್ರಿಲಿಯೋ ಗೋಲು ಬಾರಿಸಿದರು. ಈ ಮೂಲಕ ಪೆರು ಫಸ್ಟ್ ಹಾಫ್‌ನಲ್ಲಿ 1-0 ಮುನ್ನಡೆ ಕಾಯ್ದುಕೊಂಡಿತು. ಆಸ್ಟ್ರೇಲಿಯಾ ಹಲವು ಪ್ರಯತ್ನಗಳನ್ನ ಮಾಡಿದರೂ ಪ್ರಯೋಜನವಾಗಲಿಲ್ಲ.

ದ್ವಿತಿಯಾರ್ಧದಲ್ಲೂ ಆಸ್ಟ್ರೇಲಿಯಾ ಎಚ್ಚೆತ್ತುಕೊಳ್ಳಲಿಲ್ಲ. ಆದರೆ ಪೆರು ತನ್ನ ಆರ್ಭಟ ಮುಂದುವರಿಸಿತು. 50ನೇ ನಿಮಿಷದಲ್ಲಿ ಪೌಲೋ ಗೊರೆರೋ ಗೋಲು ಸಿಡಿಸೋ ಮೂಲಕ ಪೆರುಗೆ 2-0 ಮುನ್ನಡೆ ತಂದುಕೊಟ್ಟರು. ಈ ಮೂಲಕ ಪೆರು ಗೆಲುವಿನ ನಗೆ ಬೀರಿತು.
 

loader