Asianet Suvarna News Asianet Suvarna News

ಸಾವು, ವಿಕ​ಲ​ತೆ​ಯಲ್ಲಿ ಒಂದರ ಆಯ್ಕೆ ನನ್ನ ಮುಂದಿ​ತ್ತು

Asked to choose between paralysis and death Deepa Malik

ನವ​ದೆ​ಹ​ಲಿ(ಸೆ.13): ಸಾವು ಅಥವಾ ಬದುಕು... ಅಂದು ನನ್ನ ಮುಂದಿ​ದ್ದ​ದ್ದು ಈ ಎರಡೇ ದಾರಿ. ಅದೂ, ಬದು​ಕೆಂದರೆ ಬರೀ ಬದು​ಕಲ್ಲ. ದೇಹದ ಅರ್ಧ​ಭಾ​ಗವೇ ನಿಯಂತ್ರಣ ಕಳೆ​ದು​ಕೊಂಡಂತಹ ಸ್ಥಿತಿ​ಯಲ್ಲಿ ಸದಾ ವ್ಹೀಲ್‌ಚೇರ್‌​ನಲ್ಲೇ ಮುಂದಿನ ಜೀವ​ನ​ವನ್ನು ದೂಡು​ವಂಥ ಬದುಕಿನಲ್ಲಿ ಕೊನೆಗೂ ನಾನು ವಿಕಲತೆಯನ್ನೇ ಆಯ್ದುಕೊಂಡೆ ಎಂದು ರಿಯೊ ಸಾಧಕಿ ದೀಪಾ ಮಲಿಕ್‌ ಹೇಳಿದ್ದಾರೆ.

ರಿಯೊ​ದಲ್ಲಿ ನಡೆ​ಯು​ತ್ತಿ​ರುವ ಪ್ಯಾರಾ​ಲಿಂಪಿ​ಕ್ಸ್‌ನ ಮಹಿ​ಳೆ​ಯ​ರ ಶಾಟ್‌​ಫುಟ್‌ ವಿಭಾ​ಗ​ದಲ್ಲಿ ಬೆಳ್ಳಿ ಗೆದ್ದ ದೀಪಾ ಮಲಿಕ್‌, ಇಂಡಿಯಾ ಟುಡೇಗೆ ನೀಡಿ​ರುವ ಸಂದ​ರ್ಶ​ನ​ದಲ್ಲಿ ತಮ್ಮ ಸಾಹಸಗಾಥೆ​ಯನ್ನು ಬಿಚ್ಚಿ​ಟ್ಟಿ​ದ್ದಾರೆ.

1999ರಲ್ಲಿ ಪತಿ ಬಿಕ್ರಮ್‌ ಸಿಂಗ್‌, ಕಾರ್ಗಿಲ್‌ ಕದ​ನ​ದಲ್ಲಿ ತೊಡ​ಗಿ​ಕೊಂಡು ಗಡಿ​ಯಲ್ಲಿ ದೇಶದ ಸೇವೆ​ ಮಾಡು​ತ್ತಿ​ದ್ದರೆ, ಇತ್ತ ದೀಪಾ ಆಸ್ಪ​ತ್ರೆ​ಯೊಂದರಲ್ಲಿ ಶಸ್ತ್ರ​ಚಿ​ಕಿ​ತ್ಸೆಗೆ ಒಳ​ಗಾ​ಗಿ​ದ್ದರು. ರಾಜ​ಸ್ಥಾ​ನದ ಯುವ ಮಹಿಳಾ ಕ್ರಿಕೆ​ಟರ್‌ ಆಗಿದ್ದ ಅವರ ಜೀವನ ಅಂದು ಕೆಟ್ಟತಿರುವು ಪಡೆ​ದು​ಕೊಂಡಿತ್ತು. ಹೀಗೆ ತಿರುವು ಪಡೆ​ದು​ಕೊಂಡ ಈ ಬದುಕು ಅವ​ರ​ನ್ನೀಗ ರಿಯೊ ಪ್ಯಾರಾ​ಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲು​ವ​ಷ್ಟರ ಮಟ್ಟಕ್ಕೆ ತಂದು ನಿಲ್ಲಿ​ಸಿತು.

‘‘ಶಸ್ತ್ರ​ಚಿ​ಕಿ​ತ್ಸೆಯ ನಂತ​ರ​ದ ದಿನ​ಗ​ಳಲ್ಲಿ ಜೀವ​ನ​ದಲ್ಲಿ ಏನಾ​ದರೂ ಸಾಧಿ​ಸ​ಲೇ​ಬೇ​ಕೆಂಬ ಛಲ ತೊಟ್ಟನಾನು, ಕ್ರೀಡೆಯ ಬಗೆ​ಗೆ ಹೊಂದಿದ್ದ ಆಸ​ಕ್ತಿ ಬತ್ತ​ದಂತೆ ನೋಡಿ​ಕೊಂಡೆ. ಪ್ಯಾರಾ​ಅ​ಥ್ಲೀಟ್‌ ಆಗಿ ಬೆಳೆದು ನಿಂತೆ. ದೇಶೀಯ, ಅಂತಾ​ರಾಷ್ಟ್ರೀಯ ಮಟ್ಟ​ದಲ್ಲಿ ಅನೇಕ ಪದ​ಕ​ಗ​ಳನ್ನು ಗೆದ್ದಿ​ದ್ದರೂ ಪ್ಯಾರಾ​ಲಿಂಪಿಕ್ಸ್‌ ಪದ​ಕ​ದಿಂದ ವಂಚಿ​ತ​ವಾ​ಗಿರುವುದು ನನ್ನನ್ನು ಕಾಡು​ತ್ತಿ​ತ್ತು. ಇದೀಗ ಅದನ್ನೂ ಸಾಧಿ​ಸಿದ್ದೇನೆ’’ ಎಂದು ಅವರು ಹೆಮ್ಮೆ​ಯಿಂದ ಹೇಳಿ​ಕೊಂಡಿ​ದ್ದಾರೆ.

Follow Us:
Download App:
  • android
  • ios