ಪುರುಷರ ಎಫ್42-44/61-64 ವಿಭಾಗದಲ್ಲಿ ಚೌಧರಿ 60.01 ಮೀಟರ್ ದೂರ ಎಸೆಯುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಪದಕದೊಂದಿಗೆ ಭಾರತ ಒಟ್ಟಾರೆ 6 ಪದಕಗಳನ್ನು ಜಯಿಸಿದಂತಾಗಿದೆ. ಕಾಲಿನ ಅಂಗವೈಕಲ್ಯಕ್ಕೆ ತುತ್ತಾಗಿರುವ ಸಂದೀಪ್ ಚೌಧರಿ ದೇಶವೇ ಹೆಮ್ಮೆಪಡುವ ಸಾಧನೆ ಮಾಡಿದ್ದಾರೆ.
ಜಕಾರ್ತ[ಅ.08]: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್ ಗೇಮ್ಸ್’ನ ಜಾವಲಿನ್ ಥ್ರೋ ವಿಭಾಗದಲ್ಲಿ ಸಂದೀಪ್ ಚೌಧರಿ ಚಿನ್ನದ ಪದಕ ಗೆಲ್ಲುವುದರೊಂದಿಗೆ ಭಾರತಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟಿದ್ದಾರೆ.
ಪುರುಷರ ಎಫ್42-44/61-64 ವಿಭಾಗದಲ್ಲಿ ಚೌಧರಿ 60.01 ಮೀಟರ್ ದೂರ ಎಸೆಯುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಪದಕದೊಂದಿಗೆ ಭಾರತ ಒಟ್ಟಾರೆ 6 ಪದಕಗಳನ್ನು ಜಯಿಸಿದಂತಾಗಿದೆ. ಕಾಲಿನ ಅಂಗವೈಕಲ್ಯಕ್ಕೆ ತುತ್ತಾಗಿರುವ ಸಂದೀಪ್ ಚೌಧರಿ ದೇಶವೇ ಹೆಮ್ಮೆಪಡುವ ಸಾಧನೆ ಮಾಡಿದ್ದಾರೆ.
ಇನ್ನು 49 ಕೆ.ಜಿ ಪವರ್ ಲಿಫ್ಟಿಂಗ್ ವಿಭಾಗದಲ್ಲಿ ಫರ್ಮಾನ್ ಭಾಷಾ ಬೆಳ್ಳಿ ಜಯಿಸಿದರೆ, ಪರಮ್’ಜೀತ್ ಕುಮಾರ್ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಮಹಿಳೆಯರ 100 ಮೀಟರ್ ಬಟರ್’ಪ್ಲೈ ಈಜು ವಿಭಾಗದಲ್ಲಿ ದೇವಾಂಶಿ ಸತಿಜ್ವಾನ್ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರೆ, 200 ಮೀಟರ್ ಈಜು ವಿಭಾಗದಲ್ಲಿ ಸುಯಶ್ ಜಾಧವ್ ಕಂಚು ಗೆದ್ದುಕೊಂಡಿದ್ದಾರೆ.
ಭಾನುವಾರ ಭಾರತ 2 ಬೆಳ್ಳಿ ಹಾಗೂ ಮೂರು ಕಂಚು ಸೇರಿ ಒಟ್ಟು 5 ಪದಕ ಜಯಿಸಿತ್ತು. ಸಂದೀಪ್ ಚೌಧರಿ ಸಾಧನೆಗೆ ಹರ್ಭಜನ್ ಸಿಂಗ್ ಅಭಿನಂದನೆ ಸಲ್ಲಿಸಿದ್ದಾರೆ.