ಏಷ್ಯನ್ ಗೇಮ್ಸ್ ಕಬಡ್ಡಿಯಲ್ಲಿ ಭಾರತಕ್ಕೆ ಆಘಾತ ಎದುರಾಗಿದೆ. ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಕಬಡ್ಡಿ ತಂಡ ಸೋಲಿಗೆ ಗುರಿಯಾಗಿದೆ. ಅಷ್ಟಕ್ಕೂ ಭಾರತಕ್ಕೆಶಾಕ್ ನೀಡಿದ್ದು ಯಾರು? ಹೇಗಿತ್ತು ಈ ರೋಚಕ ಪಂದ್ಯ? ಇಲ್ಲಿದೆ.

ಜಕರ್ತಾ(ಆ.20): ಏಷ್ಯನ್ ಗೇಮ್ಸ್ ಕ್ರೀಡಾಕೂಡದಲ್ಲಿ ಭಾರತ ಕಬಡ್ಡಿ ತಂಡದ ಮೇಲೆ ಎಲ್ಲರ ನಿರೀಕ್ಷೆಗಳಿವೆ. ಕಾರಣ ಏಷ್ಯನ್ ಗೇಮ್ಸ್‌ನಲ್ಲಿ ಸತತ 7 ಚಿನ್ನದ ಪದಕ ಗೆದ್ದಿರುವ ಭಾರತೀಯ ಕಬಡ್ಡಿ ತಂಡಕ್ಕೆ ಇದೀಗ ಸೌತ್ ಕೊರಿಯಾ ಶಾಕ್ ನೀಡಿದೆ.

ಸೌತ್ ಕೊರಿಯಾ ವಿರುದ್ಧದ ಏಷ್ಯನ್ ಗೇಮ್ಸ್ ಕಬಡ್ಡಿ ಪಂದ್ಯದಲ್ಲಿ ಭಾರತ 23-34 ಅಂಕಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿತು. ಅಂತಿಮ ರೈಡ್‌ನಲ್ಲಿ ಭಾರತ ಅಂಕ ತರುವಲ್ಲಿ ವಿಫಲವಾಗಿದ್ದಲ್ಲದ್ದೆ, ಎದುರಾಳಿಗೆ ಅಂಕ ಬಿಟ್ಟುಕೊಟ್ಟಿತು. ಹೀಗಾಗಿ ಸೋಲು ಕಂಡಿತು.

ಜಿದ್ದಾಜಿದ್ದಿನಿಂದ ಕೂಡಿದ ಹೋರಾಟದಲ್ಲಿ ಕೊರಿಯಾ ಗೆಲುವಿನ ನಗೆ ಬೀರಿತು. ಏಷ್ಯನ್ ಗೇಮ್ಸ್‌ ಕಬಡ್ಡಿಯಲ್ಲಿ ಇದೇ ಮೊದಲ ಬಾರಿಗೆ ಭಾರತ ಸೋಲು ಕಂಡಿದೆ. ಮುಂದಿನ ಪಂದ್ಯದಲ್ಲಿ ಭಾರತ, ಥಾಯಿಲೆಂಡ್ ವಿರುದ್ಧ ಹೋರಾಟ ನಡೆಸಲಿದೆ.